News Karnataka Kannada
Wednesday, May 01 2024
ದೆಹಲಿ

15 ರಿಂದ18 ವರ್ಷದವರಿಗೆ 28 ದಿನಗಳ ಬಳಿಕ 2ನೇ ಡೋಸ್ ಕೇಂದ್ರ ಸರ್ಕಾರ ಸ್ಪಷ್ಟನೆ

Vaccine
Photo Credit : News Kannada

ನವದೆಹಲಿ: ಕೋವಿಡ್‍ನ ಮೊದಲ ಲಸಿಕೆ ಪಡೆದ 15ರಿಂದ 18ರ ವಯೋಮಾನದವರು 28 ದಿನಗಳ ಬಳಿಕ 2ನೇ ಡೋಸ್ ಪಡೆಯಲು ಅರ್ಹರಾಗಿದ್ದಾರೆ.ಕೋವಾಕ್ಸಿನ್ ಮೊದಲ ಡೋಸ್ ಪಡೆದ 15ರಿಂದ 18ರ ವಯೋಮಾನದವರು ಜ.31ರಿಂದ 2ನೇ ಡೋಸ್ ಪಡೆಯಬಹುದಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಎಲ್ಲ ಗೊಂದಲಗಳಿಗೂ ತೆರೆ ಎಳೆಯುವ ಸಲುವಾಗಿ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್, ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದುಈವರೆಗೂ 2ನೇ ಡೋಸ್‍ನ ಅವಯ ಬಗ್ಗೆ ಸ್ಪಷ್ಟತೆ ಇರಲಿಲ್ಲ.ಎಲ್ಲ ಗೊಂದಲಗಳಿಗೂ ತೆರೆ ಎಳೆಯುವ ಸಲುವಾಗಿ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್, ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಕೋವಾಕ್ಸಿನ್ ಮೊದಲ ಡೋಸ್ ಪಡೆದ 15ರಿಂದ 18ರ ವಯೋಮಾನದವರು ಜ.31ರಿಂದ 2ನೇ ಡೋಸ್ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ಜ.3ರಂದು 15ರಿಂದ 18 ವರ್ಷದವರಿಗೆ ಲಸಿಕೆ ಹಾಕುವ ಅಭಿಯಾನ ಆರಂಭವಾಗಿದೆ. ಅವರಿಗೆ ಜ.31ಕ್ಕೆ 28 ದಿನ ಪೂರ್ಣಗೊಳ್ಳಲಿದ್ದು, 2ನೇ ಡೋಸ್ ಹಾಕಿಸಿಕೊಳ್ಳಬಹುದು. ಈವರೆಗೂ 4.66 ಕೋಟಿ ಯುವ ಜನರಿಗೆ ಮೊದಲ ಡೋಸ್ ಹಾಕಿದ್ದು, ಶೇ.63ರಷ್ಟು ಒಂದೇ ತಿಂಗಳಲ್ಲಿ ಗುರಿ ಸಾಧನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಶ್ವದಲ್ಲೇ ಭಾರತ ಲಸಿಕಾ ಅಭಿಯಾನದಲ್ಲಿ ಮುಂಚೂಣಿಯಲ್ಲಿದ್ದು, ಈವರೆಗೂ 166.8 ಕೋಟಿ ಡೋಸೆಜ್‍ಗಳನ್ನು ನೀಡಿದೆ. 2ನೇ ಡೋಸ್ ಪಡೆದ ಯುವಜನರು ಕೋವಿನ್ ಆಪ್‍ನಲ್ಲಿ ತಮ್ಮ ಮಾಹಿತಿಯನ್ನು ನಮೂದಿಸುವಂತೆ ಅವರು ಸೂಚನೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು