ಭಾರತದಲ್ಲಿ ಲಸಿಕಾ ಅಭಿಯಾನ ವೇಗಗತಿಯಲ್ಲಿ ಸಾಗುತ್ತಿದ್ದು, ಕೋವಿಡ್ ವ್ಯಾಕ್ಸಿನ್ ಒಂದು ಡೋಸ್ ಮತ್ತು ಎರಡೂ ಡೋಸ್ ಪೂರ್ಣಗೊಳಿಸಿದವರಲ್ಲಿ ಭಾರತ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಈವರೆಗೆ ಶೇ. 36.30ರಷ್ಟು ಕೋವಿಡ್ ಲಸಿಕೆಯನ್ನು ಲಸಿಕೆಯನ್ನು ನಗರ ಪ್ರದೇಶಗಳಲ್ಲಿ ಮತ್ತು ಶೇ 62.54 ರಷ್ಟು ಲಸಿಕೆಯನ್ನು ಗ್ರಾಮೀಣ ಪ್ರದೇಶದಲ್ಲಿ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯದ ವೆಬ್ಸೈಟ್ನಲ್ಲಿ ಅಪ್ ಲೋಡ್ ಮಾಡಿರುವ ಕೋವಿಡ್ ಲಸಿಕೆ ಇ- ಬುಕ್ ನಲ್ಲಿ ಹೇಳಿದೆ.
ಈವರೆಗೆ ನೀಡಲಾದ ಒಟ್ಟು ಕೋವಿಡ್-19 ಲಸಿಕೆ ಪ್ರಮಾಣದಲ್ಲಿ ಅಮೆರಿಕವನ್ನು ಭಾರತ ಹಿಂದಿಕ್ಕಿದೆ. ಭಾರತದಲ್ಲಿ ಒಟ್ಟು 181 ಮಿಲಿಯನ್ ಜನರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಅಮೆರಿಕದಲ್ಲಿ 178 ಮಿಲಿಯನ್ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಇಲ್ಲಿಯ ತನಕ ಪುರುಷರಿಗೆ ಶೇ. 52.5, ಮಹಿಳೆಯರಿಗೆ ಶೇ 47.5ರಷ್ಟು ಲಸಿಕೆ ನೀಡಲಾಗಿದೆ.ವಯಸ್ಕರಲ್ಲಿ ಶೇ 60.7ರಷ್ಟು ಜನರು ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದಾರೆ ಎಂದು ತಿಳಿಸಿದೆ.