ನವದೆಹಲಿ: ದೇಶದಲ್ಲಿ ಒಮೈಕ್ರಾನ್ ವೈರಸ್ ಭೀತಿಯ ಸಂದರ್ಭದಲ್ಲೇ ಶೇ.60ರಷ್ಟು ಜನರು ಲಸಿಕೆ ಪಡೆದಿರೋದು ಕೋವಿಡ್ ವಿರುದ್ಧದ ಹೋರಾಟಕ್ಕೆ ಸಹಕಾರಿಯಾಗಲಿದೆ ಎಂಬುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿಯಲ್ಲಿ ತಿಳಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ದತ್ತಾಂಶದ ಪ್ರಕಾರ, ಭಾರತದಲ್ಲಿ ಕೊರೊನಾ ವೈರಸ್ ನ ಒಮೈಕ್ರಾನ್ ರೂಪಾಂತರದ ಒಟ್ಟು ಪ್ರಕರಣಗಳು ಗುರುವಾರ ಬೆಳಿಗ್ಗೆ 238ಕ್ಕೆ ಏರಿದೆ. ಇದರ ನಡುವೆಯೂ ದೇಶದಲ್ಲಿ ಶೇ.60ರಷ್ಟು ಜನರಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿರೋದಾಗಿ ಮಾಹಿತಿಯನ್ನು ನೀಡಿದೆ.