News Karnataka Kannada
Sunday, May 05 2024
ದೆಹಲಿ

ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾದೆಲ್ಲಾರ ಪುತ್ರ ಜೈನ್​ ನಾದೆಲ್ಲಾ ನಿಧನ

Sathyam Nadella Son
Photo Credit : Twitter

ನವದೆಹಲಿ: ಮೈಕ್ರೋಸಾಫ್ಟ್​ ಕಂಪನಿಯ ಸಿಇಒ ಭಾರತ ಮೂಲದ ಸತ್ಯ ನಾದೆಲ್ಲಾ ಅವರ 26 ವರ್ಷದ ಪುತ್ರ ಜೈನ್​ ನಾದೆಲ್ಲ ಅವರು ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಜೈನ್​ ನಾದೆಲ್ಲಾ ಅವರು ಹುಟ್ಟಿನಿಂದಲೇ ಮೆದುಳಿನ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದರು.ಮಗ ಮೃತಪಟ್ಟಿರುವ ವಿಚಾರವನ್ನು ಸತ್ಯ ನಾದೆಲ್ಲ ಅವರು ಈಮೇಲ್​ ಮೂಲಕ ತಮ್ಮ ಸಿಬ್ಬಂದಿಗೆ ತಿಳಿಸಿದ್ದಾರೆ.

ಈ ದುಃಖದ ಸಮಯದಲ್ಲಿ ಕುಟುಂಬಕ್ಕೆ ಖಾಸಗಿ ಸಮಯ ನೀಡಲು ಮತ್ತು ಅವರ ಪರವಾಗಿ ಪ್ರಾರ್ಥಿಸುವಂತೆ ಕೋರಿ ನಾದೆಲ್ಲ ಅವರು ಈಮೇಲ್​ ಮೂಲಕ ಕೇಳಿಕೊಂಡಿದ್ದಾರೆ.

2014ರಿಂದ ಮೈಕ್ರೋಸಾಫ್ಟ್​ ಕಂಪನಿಯ ಸಿಇಒ ಆಗಿ ನೇಮಕವಾದಾಗಿನಿಂದ ಸತ್ಯ ನಾದೆಲ್ಲಾ ಅವರು ವಿಕಲಾಂಗ ಬಳಕೆದಾರರಿಗೆ ಉತ್ತಮ ಸೇವೆ ನೀಡಲು ಉತ್ಪನ್ನಗಳನ್ನು ವಿನ್ಯಾಸಗೊಳಿಸಲು ಗಮನ ಕೇಂದ್ರಿಕರಿಸಿದ್ದರು ಮತ್ತು ಪುತ್ರ ಜೈನ್​ ಬೆಳವಣಿಗೆಯನ್ನು ಸಹ ನೋಡಿಕೊಳ್ಳುತ್ತಿದ್ದರು.

ಕಳೆದ ವರ್ಷ, ಜೈನ್ ಅವರು ಹೆಚ್ಚಿನ ಚಿಕಿತ್ಸೆಯನ್ನು ಪಡೆದ ಮಕ್ಕಳ ಆಸ್ಪತ್ರೆ ಸಿಯಾಟಲ್​ನಲ್ಲಿರುವ ಚಿಲ್ಡ್ರನ್ಸ್ ಸೆಂಟರ್ ಫಾರ್ ಇಂಟಿಗ್ರೇಟಿವ್ ಬ್ರೈನ್ ರಿಸರ್ಚ್‌ನ ಭಾಗವಾಗಿ ಪೀಡಿಯಾಟ್ರಿಕ್ ನ್ಯೂರೋಸೈನ್ಸ್‌ ವಿಭಾಗದಲ್ಲಿ ಜೈನ್ ನಾದೆಲ್ಲ ಎಂಡೋವ್ಡ್ ಚೇರ್ ಅನ್ನು ಸ್ಥಾಪಿಸಲು ಸತ್ಯ ನಾದೆಲ್ಲ ಅವರು ಕೈಜೋಡಿಸಿದ್ದರು. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 5 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು