ನವದೆಹಲಿ: ಸಂಗೀತ ಸಂಯೋಜಕ ಮತ್ತು ಖ್ಯಾತ ಗಾಯಕ ಬಪ್ಪಿ ಲಹಿರಿ (69) ಅವರು ಮುಂಬೈ ಆಸ್ಪತ್ರೆಯಲ್ಲಿಂದು ಕೊನೆಯುಸಿರೆಳೆದಿದ್ದಾರೆ.ಕಳೆದ ವರ್ಷ ಏಪ್ರಿಲ್ನಲ್ಲಿ ಬಪ್ಪಿ ಲಹಿರಿ ಅವರು ಕರೊನಾ ಪಾಸಿಟಿವ್ ಆಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು.
ಕೆಲವೇ ದಿನಗಳಲ್ಲಿ ಗುಣಮುಖರಾಗಿ ಪೂರ್ಣ ಬೆಡ್ ರೆಸ್ಟ್ನಲ್ಲಿದ್ದರು. ಅವರ ಸುಲಭ ಓಡಾಟದ ಅನುಕೂಲಕ್ಕಾಗಿ ಅವರ ಜುಹು ನಿವಾಸದಲ್ಲಿ ಲಿಫ್ಟ್ನೊಂದಿಗೆ ಗಾಲಿಕುರ್ಚಿಯನ್ನು ಸಹ ಅಳವಡಿಸಲಾಗಿತ್ತು.
ಬಪ್ಪಿ ಲಹಿರಿ ಅವರು 1970-80ರ ದಶಕದಲ್ಲಿ ಅನೇಕ ಸಿನಿಮಾಗಳಲ್ಲಿ ಪ್ರಖ್ಯಾತ ಹಾಡುಗಳನ್ನು ನೀಡಿದ್ದಾರೆ. ಅವುಗಳಲ್ಲಿ ಚಲ್ತೆ ಚಲ್ತೆ, ಡಿಸ್ಕೋ ಡಾನ್ಸರ್ ಮತ್ತು ಶರಾಬಿ ಪ್ರಮುಖವಾದವು. 2020ರಲ್ಲಿ ಬಿಡುಗಡೆಯಾದ ಬಾಘಿ 3 ಚಿತ್ರದ ಭಂಕಾಸ್ ಶೀರ್ಷಿಕೆಯ ಹಾಡೇ ಬಪ್ಪಿ ಲಹಿರಿ ಅವರ ಕೊನೆಯ ಹಾಡು.