ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ವೈದ್ಯಕೀಯ ಕೋರ್ಸ್ಗೆ ಪ್ರವೇಶಕ್ಕಾಗಿ ನಡೆಯುವ ನೀಟ್ ಪರೀಕ್ಷೆಯ ಫಲಿತಾಂಶ ಇಂದು (ನವೆಂಬರ್ 1) ಪ್ರಕಟವಾಗಿದೆ.
ರಾಷ್ಟ್ರೀಯ ಟೆಸ್ಟಿಂಗ್ ಏಜೆನ್ಸಿಯಿಂದ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ. ನೀಟ್ ಪದವಿ ಕೋರ್ಸ್ ಫಲಿತಾಂಶ ಘೋಷಣೆಗೆ ಸುಪ್ರೀಂಕೋರ್ಟ್ ಈ ಮೊದಲು ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಈಗ ಫಲಿತಾಂಶ ಪ್ರಕಟವಾಗಿದೆ.
R Shreyas of SRS PU college #Chitradurga 620/720 in the #NEETUG2021 results announced on Monday.@XpressBengaluru @santwana99 @ramupatil_TNIE @chetanabelagere pic.twitter.com/r9WPOfKks2
— Subash_TNIE (@S27chandr1_TNIE) November 1, 2021
ತೆಲಂಗಾಣದ ಮೃಣಾಲ್ ಕುಟ್ಟೇರಿ, ದೆಹಲಿಯ ತನ್ಮಯ ಗುಪ್ತಾ ಹಾಗೂ ಮಹಾರಾಷ್ಟ್ರದ ಕಾರ್ತಿಕ್ ಜಿ. ನಾಯರ್ಗೆ ಟಾಪ್ ಶ್ರೇಣಿ ಲಭ್ಯವಾಗಿದೆ. ಮೂವರು ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ವೇಳೆ ಟೈ ಬ್ರೇಕಿಂಗ್ ಫಾರ್ಮುಲಾ ಬಳಸಬೇಕು ಎಂದು ಎನ್ಟಿಎ ಹೇಳಿದೆ. ಈಗ ಮೊದಲ ಶ್ರೇಣಿಯನ್ನು ಮೂವರು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ನೀಟ್ ಯುಜಿಸಿ 2021 ಪರೀಕ್ಷೆಯಲ್ಲಿ ಒಟ್ಟು 15,44,275 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಅದರಲ್ಲಿ 8,70,074 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
#Karnataka CET state topper Meghan HK secures 5th rank in #NEET. Meghan from #mysuru who had created a record by securing the top rank in all streams of CET, has secured 715 marks in NEET.@XpressBengaluru @santwana99 @KannadaPrabha @NewIndianXpress @chetanabelagere pic.twitter.com/DA9SXZ3ki1
— Karthik K K (@Karthiknayaka) November 1, 2021
ಕರ್ನಾಟಕದ ವಿದ್ಯಾರ್ಥಿಗಳು
ಇನ್ನು ನೀಟ್ ಪರೀಕ್ಷೆಯಲ್ಲಿ ಕರ್ನಾಟಕದ ಹಲವು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಚಿತ್ರದುರ್ಗದ ಎಸ್ಆರ್ಎಸ್ ಪದವಿಪೂರ್ವ ಕಾಲೇಜಿನ ಎಲ್ ಎನ್ ನಿಹಾರಿಕಾ, ಆರ್ ಶ್ರೇಯಸ್ ಎಂಬ ವಿದ್ಯಾರ್ಥಿಗಳು 720 ಅಂಕಗಳಿಗೆ 620 ಅಂಕಗಳಿಸಿದ್ದಾರೆ. ಅಂತೆಯೇ ಈ ಹಿಂದೆ ಸಿಇಟಿ ಪರೀಕ್ಷೆಯಲ್ಲಿ ಕರ್ನಾಟಕದಲ್ಲಿ ಟಾಪರ್ ಆಗಿದ್ದ ಮೈಸೂರು ಮೂಲದ ಮೇಘನ್ ಹೆಚ್ ಕೆ ಅವರು ನೀಟ್ ಪರೀಕ್ಷೆಯಲ್ಲಿ 5ನೇ ಸ್ಥಾನಗಳಿಸಿದ್ದು, ಒಟ್ಟು 715 ಅಂಕಗಳನ್ನು ಗಳಿಸಿ ದಾಖಲೆ ನಿರ್ಮಿಸಿದ್ದಾರೆ.