News Karnataka Kannada
Sunday, May 05 2024
ದೆಹಲಿ

ನಾವು ಇತಿಹಾಸ ಬರೆಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಅಮಿತ್‌ ಶಾ

Manipur violence: Amit Shah calls all-party meet on June 24
Photo Credit :

ಹೊಸದಿಲ್ಲಿ: ಈಗ ನಾವು ಇತಿಹಾಸ ಬರೆಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಇದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಖಡಕ್‌ ಮಾತು. ಹೊಸದಿಲ್ಲಿಯ ಎನ್‌ಡಿಎಂಸಿ ಹಾಲ್‌ನಲ್ಲಿ ಶುಕ್ರವಾರ “ಮಹಾರಾಣಾಸ್‌: ಎ ತೌಸಂಡ್‌ ಇಯರ್‌ ವಾರ್‌ ಫಾರ್‌ ಧರ್ಮ’ ಎಂಬ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.

ಕರ್ನಾಟಕದಲ್ಲಿ ಶಾಲಾ ಮಕ್ಕಳ ಪಠ್ಯ ಪರಿಷ್ಕರಣೆ ವಿಚಾರದಲ್ಲಿ ವಿವಾದ ಸೃಷ್ಟಿಯಾಗಿರುವ ಮತ್ತು ಇತಿಹಾಸ ಪಠ್ಯಗಳನ್ನು ಎಡಪಂಥೀಯ ಇತಿಹಾಸಕಾರರು ಬರೆದದ್ದು, ಅದರಲ್ಲಿ ಹಿಂದೂ ರಾಜರು, ಹಿಂದೂ ಸಾಮ್ರಾಜ್ಯಗಳ ಕೊಡುಗೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಆರೆಸ್ಸೆಸ್‌, ಬಿಜೆಪಿ ಆರೋಪ ಮಾಡುತ್ತಿರುವ ನಡುವೆಯೇ ಶಾ ನೀಡಿ ರುವ ಈ ಹೇಳಿಕೆ ಮಹತ್ವ ಪಡೆದಿದೆ.

ಸತ್ಯವನ್ನು ಪ್ರಚುರಪಡಿಸುತ್ತೇವೆ ಇತಿಹಾಸಗಳನ್ನು ಸರಕಾರಗಳಿಗೆ ಸೃಷ್ಟಿಸಲು ಆಗದು. ಏಕೆಂದರೆ ಅವುಗಳನ್ನು ಸತ್ಯ ಘಟನೆ ಆಧರಿಸಿ ಬರೆದಿರ ಲಾಗುತ್ತದೆ. ಭಾರತದ ಬಹುತೇಕ ಇತಿಹಾಸಕಾರರು ಪಾಂಡ್ಯರು, ಚೋಳರು, ಮೌರ್ಯರು, ಗುಪ್ತರು ಮತ್ತು ಅಹೋಮರ ಭವ್ಯ ಆಡಳಿತವನ್ನು ನಿರ್ಲಕ್ಷಿಸಿ, ಕೇವಲ ಮೊಘಲರಿಗಷ್ಟೇ ಆದ್ಯತೆ ನೀಡಿದ್ದರು. ಆಕ್ರಮಣಕಾರರ ವಿರುದ್ಧ ಭಾರತೀಯ ರಾಜರು ಮಾಡಿರುವಂಥ ಹಲವಾರು ಯು ದ್ಧಗಳು, ಹೋರಾಟಗಳನ್ನು ಜನರು ಮರೆತೇ ಬಿಟ್ಟಿದ್ದಾರೆ.

ಅಸ್ಸಾಂನ ಅಹೋಮ್‌ ರಾಜರು, ವಾಯವ್ಯ ಭಾಗದಲ್ಲಿ ಶಿವಾಜಿ ನೇತೃತ್ವದ ಮರಾಠರು ನಡೆಸಿದ ಹೋರಾಟದಿಂದಾಗಿ ದೇಶವು ಈಗ ಇಲ್ಲಿಗೆ ಬಂದು ನಿಂತಿದೆ. ಇಂಥ ಯುದ್ಧಗಳ ಬಗ್ಗೆ ಮುಂದಿನ ತಲೆಮಾರಗಳಿಗೆ ತಿಳಿಸ ಬೇಕಾದ್ದು ನಮ್ಮ ಕರ್ತವ್ಯ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ದೇಶವನ್ನಾಳಿದ ಹಿಂದೂ ಸಾಮ್ರಾಟರ ಪರಾಕ್ರಮಗಳನ್ನು ಬರೆಯ ತೊಡಗಿದಾಗ ಸತ್ಯ ಹೊರಹೊಮ್ಮಲು ಶುರುವಾಗುತ್ತದೆ. ಇಂಥ ಸತ್ಯವನ್ನು ಬರೆಯುವುದರಿಂದ ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾವೀಗ ಸ್ವತಂತ್ರರಾಗಿದ್ದೇವೆ. ನಮ್ಮ ಇತಿಹಾಸ ವನ್ನು ನಾವೇ ಬರೆಯುತ್ತೇವೆ ಎಂದೂ ಗುಡುಗಿದ್ದಾರೆ ಶಾ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು