ನವದೆಹಲಿ : ದೇಶಾದ್ಯಂತ ದಿನೇ ದಿನೇ ಹೆಚ್ಚಾಗುತ್ತಿರುವಂತ ನಗರೀಕರಣಿದಂದಾಗಿ, ಮರಗಳ ಮಾರಣಹೋಮವೇ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ನಾಶವಾಗಿರುವಂತ ಹಸಿರನ್ನು ಮತ್ತೊಮ್ಮೆ ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ.
ವಸತಿ, ಕೈಗಾರಿಕಾ ಉದ್ದೇಶದ ಯೋಜನೆಗಳ ಒಟ್ಟು ಜಾಗದ ಪೈಕಿ ಶೇ.10ರಷ್ಟು ಪ್ರದೇಶದಲ್ಲಿ ಅರಣ್ಯ ಬೆಳೆಸುವ ಸಂಬಂಧ ಹೊಸ ನಿಯಮ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ.
ಅಂದಹಾಗೇ 5 ಸಾವಿರ ಚದರ ಮೀಟರ್ ಅಂದ್ರೇ 53,000 ಚದರಡಿ ಮೇಲ್ಪಟ್ಟ ಕಟ್ಟಡದ ಜಾಗ ಹೊಂದಿರುವ ಹೊಸ ಯೋಜನೆಗಳು, ವಿಸ್ತರಣೆ, ಹಳೆಯ ಕಟ್ಟಡಗಳ ನವೀಕರಣ ಅಥವಾ ದುರಸ್ತಿ ಪ್ರಕ್ರಿಯೆ ವೇಳೆ ಪ್ರತಿ 80 ಚದರ ಮೀಟರ್ ಗೆ ಒಂದು ಗಿಡ ಇಡುವಂತೆ ನೋಡಿಕೊಳ್ಳಬೇಕು. ಒಟ್ಟಾರೆ ಜಾಗದ ಶೇ.10ರಷ್ಟು ಪ್ರದೇಶದಲ್ಲಿ ಗಿಡ ನೆಡಬೇಕು ಎಂದು ಕರಡು ನಿಯಮ ಸಿದ್ಧಪಡಿಸಿದೆ.
ಫೆ.28ರಂದು ಕೇಂದ್ರ ಪರಿಸರ ಸಚಿವಾಲಯವು ಕಟ್ಟಡ ನಿರ್ಮಾಣ, ಪರಿಸರ ನಿರ್ವಹಣೆ ನಿಯಮ 2022ರ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಇದಕ್ಕೆ 60 ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸೋದಕ್ಕೆ ಅವಕಾಶ ನೀಡಲಾಗಿದೆ.