News Karnataka Kannada
Friday, May 03 2024
ದೆಹಲಿ

ದೆಹಲಿ: 36 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರೋಪಿಗಳ ಬಂಧನ

Rape
Photo Credit :

ದೆಹಲಿ, ಏ. 15 : ರಾಷ್ಟ್ರದ ರಾಜಧಾನಿಯಲ್ಲಿ ಮಹಿಳೆಯರು ಎಷ್ಟು ಸೇಫ್‌ ಎನ್ನುವುದೇ ಪ್ರಶ್ನೆಯಾಗಿದ್ದು, ಮಹಿಳೆಯ ಮೇಲೆ ಗ್ಯಾಂಗ್‌ ರೇಪ್‌ ನಡೆಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. 36 ವರ್ಷದ ಮಹಿಳೆಯ ಮೇಲೆ ಮೂರು ಜನ ಕಾಮುಕರು ಸೇರಿಕೊಂಡು ಅತ್ಯಾಚಾರ ಎಸಗಿದ್ದರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳನ್ನೂ ದೆಹಲಿ ಪೋಲಿಸರು ಬಂಧಿಸಿದ್ದಾರೆ.

ಮಹಿಳೆಯು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ದೆಹಲಿಯ ಪೋಲಿಸರಿಗೆ ದೂರು ನೀಡಿದ್ದಳು. ನವೀನ್‌ ಸಿಂಗ್‌ ಭಂಡಾರಿ (28), ಬಿಶ್ವಾ ಮೋಹನ್‌ (26) ಮತ್ತು ಅಕ್ಷಯ್‌ ತನೇಜಾ ಎಂಬುವ ಯುವಕರು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸದೆ. ಘಟನೆ ನಡೆದ ಕೆಲವೇ ಕೆಲವು ಗಂಟೆಗಳಲ್ಲಿ ದೆಹಲಿ ಪೋಲಿಸರು ಆರೋಪಿಗಳನ್ನು ಬಂಧಿಸಿದ್ದಾರೆ.

ದೆಹಲಿಯ ಪಂಜಾಬಿ ಬಾಗ್‌ ಪೋಲಿಸ್‌ ಠಾಣೆಯ ಪೋಲಿಸರು ಸೆಕ್ಷನ್‌ 376 Dರ ಅಡಿ ಹಾಗೂ ಸೆಕ್ಷನ್‌ 328 ರ ಅಡಿ ಎಫ್‌ಐಆರ್‌ ದಾಖಲಿಸಿಕೊಂಡು ಶುಕ್ರವಾರ (15 ಏಪ್ರಿಲ್) ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು ಎಂದು ದೆಹಲಿಯ ಪಶ್ಚಿಮ ವಿಭಾಗದ ಉಪ ಪೋಲಿಸ್‌ ವರಿಷ್ಠಾಧಿಕಾರಿ ಜ್ಞಾನಶ್ಯಾಮ್‌ ಬನ್ಸಾಲ್ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು