ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಮಿಕ್ರಾನ್ ಸೋಂಕಿನ ಅಬ್ಬರ ಹೆಚ್ಚಳವಾಗಿದ್ದು, ಇಂದು ಮತ್ತೆ ನಾಲ್ಕು ಜನರಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ.
ದೆಹಲಿಯಲ್ಲಿ ಗುರುವಾರ 4 ಹೊಸ ಒಮೈಕ್ರಾನ್ ರೋಗಿಗಳು ದೃಢಪಟ್ಟಿವೆ. ಈ ಮೂಲಕ ದೆಹಲಿಯಲ್ಲಿ ಒಟ್ಟು 10 ಒಮೈಕ್ರಾನ್ ಪ್ರಕರಣಗಳಿವೆ. ಇನ್ನು ದೇಶದ ಹಲವು ರಾಜ್ಯಗಳಲ್ಲಿ ಒಮಿಕ್ರಾನ್ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು ಯಾವ ರಾಜ್ಯದಲ್ಲಿ ಎಷ್ಟು ಒಮಿಕ್ರಾನ್ ಪ್ರಕರಣಗಳ ಮಾಹಿತಿ.
ಮಹಾರಾಷ್ಟ್ರ-32, ರಾಜಸ್ಥಾನ-17, ದೆಹಲಿ-10, ಕೇರಳ- 5, ಗುಜರಾತ್-4, ಕರ್ನಾಟಕ-3, ಆಂಧ್ರಪ್ರದೇಶ-1, ಚಂಡೀಗಢ -1, ಪಶ್ಚಿಮ ಬಂಗಾಳ-1, ತಮಿಳುನಾಡು-1.