ನವದೆಹಲಿ:ದೆಹಲಿಯಲ್ಲಿ ಇಂದು ನಾಲ್ಕು ಹೊಸ ಒಮಿಕ್ರಾನ್ ಪ್ರಕರಣ ಬೆಳಕಿಗೆ ಬಂದಿದೆ. ಪ್ರಸ್ತುತ, 35 ಕೊವೀಡ್-19 ರೋಗಿಗಳು ಮತ್ತು ಒಮಿಕ್ರಾನ್ ನ ಮೂರು ಶಂಕಿತ ಪ್ರಕರಣಗಳನ್ನು LNJP ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.ಈ ಬಗ್ಗೆ ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ನಾಲ್ಕು ಹೊಸ ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದ್ದಾರೆ.
ಇದರೊಂದಿಗೆ, ದೆಹಲಿಯಲ್ಲಿ ಹೊಸ ಕೊವೀಡ್-19 ರೂಪಾಂತರದ ಒಟ್ಟು ಪ್ರಕರಣಗಳ ಸಂಖ್ಯೆ ಆರಕ್ಕೆ ಏರಿದೆ. ‘ಆರು ಪ್ರಕರಣಗಳಲ್ಲಿ, ಒಬ್ಬ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ’ ಎಂದು ಜೈನ್ ಹೇಳಿದರು.