News Karnataka Kannada
Monday, April 29 2024
ದೆಹಲಿ

ಡಿಸೆಂಬರ್ ಒಂದರಿಂದ ಬೆಂಕಿಪೊಟ್ಟಣದ ಬೆಲೆ 2 ರೂಪಾಯಿಗೆ ಏರಿಕೆ…

Match Box
Photo Credit :

ನವದೆಹಲಿ:ಡಿಸೆಂಬರ್‌ ಒಂದರಿಂದ, ಬೆಂಕಿ ಪೊಟ್ಟಣದ ಬೆಲೆ ಪ್ರಸ್ತುತ ₹1 ರಿಂದ ₹2 ಗೆ ಏರಿಕೆ ಆಗಲಿದ್ದು ಗ್ರಾಹಕರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ತಟ್ಟಿದೆ . 14 ವರ್ಷಗಳ ನಂತರ ಬೆಂಕಿಪೊಟ್ಟಣದ ಬೆಲೆ ಹೆಚ್ಚಳವಾಗುತ್ತಿದೆ.ಕಚ್ಚಾ ವಸ್ತುಗಳ ಬೆಲೆಯಲ್ಲಿನ ಹೆಚ್ಚಳ ಮತ್ತು ನಂತರದ ಉತ್ಪಾದನಾ ವೆಚ್ಚದಲ್ಲಿನ ಏರಿಕೆಯು ಬೆಂಕಿಪಟ್ಟಣದ ಬೆಲೆಯಲ್ಲಿ 100% ಹೆಚ್ಚಳಕ್ಕೆ ಕಾರಣವೆಂದು ಉದ್ಯಮ ಸಂಸ್ಥೆ ಉಲ್ಲೇಖಿಸಿದೆ.ಆದಾಗ್ಯೂ ಒಂದು ಪೆಟ್ಟಿಗೆಯಲ್ಲಿ ಬೆಂಕಿಕಡ್ಡಿಗಳ ಸಂಖ್ಯೆ, ಹೆಚ್ಚು ಇರುತ್ತದೆ. ₹2 ಮ್ಯಾಚ್‌ಬಾಕ್ಸ್ 50  ಕಡ್ಡಿಗಳನ್ನು ಹೊಂದಿರುತ್ತದೆ,ಈ ಮೊದಲು ₹1 ಬಾಕ್ಸ್‌ನಲ್ಲಿ 36  ಕಡ್ಡಿ ಇರುತಿತ್ತು. ಬೆಲೆ ಏರಿಕೆ ಡಿಸೆಂಬರ್ 1 ರಿಂದ ಜಾರಿಗೆ ಬರಲಿದೆ.

ರಾಷ್ಟ್ರೀಯ ಸಣ್ಣ ಬೆಂಕಿಪೆಟ್ಟಿಗೆ ತಯಾರಕರ ಸಂಘದ ಕಾರ್ಯದರ್ಶಿ ವಿ ಎಸ್ ಸೇತುರಥಿನಂ ‘ ಉತ್ಪಾದನಾ ವೆಚ್ಚದ ಹೆಚ್ಚಳದಿಂದಾಗಿ ಬೆಂಕಿಕಡ್ಡಿಯ ಗರಿಷ್ಠ ಚಿಲ್ಲರೆ ಬೆಲೆಯನ್ನು ಹೆಚ್ಚಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ.ಒಂದು ಕಿಲೋ ಕೆಂಪು ರಂಜಕ ₹410ರಿಂದ ₹850ಕ್ಕೆ, ಮೇಣ ₹72ರಿಂದ ₹85ಕ್ಕೆ, ಪೊಟಾಶಿಯಂ ಕ್ಲೋರೇಟ್ ₹68ರಿಂದ ₹80ಕ್ಕೆ, ಸ್ಪ್ಲಿಂಟ್‌ಗಳು ₹42ರಿಂದ ₹48ಕ್ಕೆ ಏರಿಕೆಯಾಗಿದೆ. ಹೊರ ಪೆಟ್ಟಿಗೆ ₹42ರಿಂದ ₹55ಕ್ಕೆ ಮತ್ತು ಒಳಗಿನ ಬಾಕ್ಸ್ ₹ 38 ರಿಂದ ₹ 48 ಕ್ಕೆ ಏರಿಕೆ ಆಗಿದೆ. ಈ ರೀತಿಯಾಗಿ, ಎಲ್ಲಾ ಕಚ್ಚಾ ವಸ್ತುಗಳ ಬೆಲೆ ಅನೇಕ ಪಟ್ಟು ಹೆಚ್ಚಾಗಿದೆ, ‘ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು