News Karnataka Kannada
Saturday, May 04 2024
ದೆಹಲಿ

ಬಿಜೆಪಿಯೆಂಬ ವಾಷಿಂಗ್‌ ಮಷಿನ್‌ ಗೆ ಹಾಕಿದ್ರೆ ಪಾಪವೆಂಬ ಕೊಳೆ ಹೋಗುತ್ತದೆಯೇ: ಖರ್ಗೆ

Will the dirt of sin go away if put in bjp's washing machine: Kharge
Photo Credit : IANS

ನವದೆಹಲಿ: ಸದನದೊಳಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಪ್ರತಿಪಕ್ಷ ಸದಸ್ಯರಿಗೆ ಸಾಕಷ್ಟು ಅವಕಾಶಗಳು ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸೋಮವಾರ ವಿಶೇಷ ಅಧಿವೇಶನದ ವೇಳೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಖರ್ ಅವರಿಗೆ ಈ ಬಗ್ಗೆ ದೂರು ಹೇಳಿಕೊಂಡರು. ಅಲ್ಲದೆ ಸಂಸತ್ತಿನ ಒಳಗೆ ಕ್ಯಾಮೆರಾಗಳನ್ನು ನೇರ ಪ್ರಸಾರ ಮಾಡುವಂತೆ ಮನವಿ ಮಾಡಿದರು.

ನೀವು ನಮ್ಮ ರಕ್ಷಕರು, ನಮಗೆ ಏನಾದರೂ ಅನ್ಯಾಯವಾದರೆ, ನಮ್ಮನ್ನು ರಕ್ಷಿಸಬೇಕಾದವರು ನೀವೇ, ನಾವು ಸಂಖ್ಯೆಯಲ್ಲಿ ಕಡಿಮೆಯಿದ್ದೇವೆ. ಅವರೆಲ್ಲರೂ ( ಎನ್‌ಡಿಎ ಸಂಸದರು) ನಮ್ಮ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರೆ ನಾವು ಅಳುತ್ತಾ ನಿಮ್ಮತ್ತ ಬರುತ್ತೇವೆ. ನೀವೇ ನಮಗೆ ರಕ್ಷಣೆ ಕೊಡಬೇಕು ಎಂದರು.

ಮಣಿಪುರದ ಜನಾಂಗೀಯ ಹಿಂಸಾಚಾರದ ಬಗ್ಗೆಯೂ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಸದನದಲ್ಲಿ ಪ್ರಧಾನಿ ಈ ಕುರಿತು ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದ್ದವು. ಆದರೆ “ಪ್ರಧಾನಿ ಈ ವಿಚಾರದಲ್ಲಿಯೂ ಕೂಡ ನಿಮ್ಮ ಮಾತನ್ನೂ ಕೇಳದಿರುವುದು ದೊಡ್ಡ ಸಮಸ್ಯೆಯಾಗಿದೆ ಎಂದರು.

ಕಟ್ಟಡದ ಅಡಿಪಾಯದ ಕಲ್ಲುಗಳು ಯಾರಿಗೂ ಗೋಚರಿಸುವುದಿಲ್ಲ, ಗೋಡೆಯ ಮೇಲಿನ ಹೆಸರು ಮಾತ್ರ ಎಲ್ಲರಿಗೂ ಕಾಣುತ್ತದೆ ಎಂದು ಖರ್ಗೆ ಅವರು ಪ್ರಧಾನಿ ಮೋದಿಯವರನ್ನು ಹೆಸರಿಸದೆ ಗೇಲಿ ಮಾಡಿದರು. ಮುಂದುವರಿದು ಸಿಬಿಐ ಮತ್ತು ಇಡಿಯಂತಹ ಕೇಂದ್ರೀಯ ಸಂಸ್ಥೆಗಳ ಮೂಲಕ “ಪ್ರಬಲ” ಪ್ರತಿಪಕ್ಷವನ್ನು ದುರ್ಬಲಗೊಳಿಸುವತ್ತ ಸರ್ಕಾರ ಗಮನಹರಿಸುತ್ತಿದೆ.

ನೆಹರೂ ಜೀ ಅವರು ಪ್ರಬಲ ಪ್ರತಿಪಕ್ಷದ ಅನುಪಸ್ಥಿತಿಯ ಅರ್ಥ ವ್ಯವಸ್ಥೆ ನ್ಯೂನ್ಯತೆ ಎಂದು ಪರಿಗಣಿಸಿದ್ದರು. ಆದರೆ ಈಗ, ಪ್ರಬಲವಾದ ವಿರೋಧ ಪಕ್ಷವಿದೆ. ಅದನ್ನು ಇಡಿ ಮೂಲಕ ದುರ್ಬಲಗೊಳಿಸಲಾಗುತ್ತಿದೆ. CBI ದಾಳಿ ಮಾಡಿ ಹೆದರಿಸಿ ನಾಯಕರನ್ನು ಬಿಜೆಪಿಗೆ ಕರೆದುಕೊಂಡು ಹೋಗಿ, ವಾಷಿಂಗ್ ಮೆಷಿನ್‌ನಲ್ಲಿ ಹಾಕಿ, ಎಲ್ಲಾ ಕ್ಲೀನ್ ಮಾಡಿ ಹೊರಗೆ ಬರುವಂತೆ ಮಾಡಲಾಗುತ್ತದೆ.

ಜವಾಹರಲಾಲ್ ನೆಹರು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅವರ ಕೊಡುಗೆಯನ್ನು ಸ್ಮರಿಸಿದ ಖರ್ಗೆ, ನೆಹರು ಜಿ ಭಾರತವನ್ನು ಕಷ್ಟದ ಸಮಯದಲ್ಲಿ ಮುನ್ನಡೆಸಿದರು, ಅವರು ಭಾರತದ ಸ್ವಾತಂತ್ರ್ಯಕ್ಕಾಗಿ 14 ವರ್ಷಗಳ ಕಾಲ ಜೈಲಿನಲ್ಲಿದ್ದರು. ಬಿಜೆಪಿಯವರು ಅವರ ಬಗ್ಗೆ ಕೀಳಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು