ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗದ ವಿಶೇಷ ಚೇತನರಿಗೆ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಬಗ್ಗೆ ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್ ಮಾಹಿತಿ ನೀಡಿದ್ದು, ನಿರ್ಬಂಧಿತ ಚಲನಶೀಲತೆ, ವಿಶೇಷ ಅಗತ್ಯಗಳನ್ನು ಹೊಂದಿರುವ ಜನರಿಗೆ ಮನೆಯಲ್ಲಿಯೇ ಲಸಿಕೆ ಹಾಕಲಾಗುವುದು. ಇದಕ್ಕಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆಯೂ ಇಲ್ಲ ಎಂದು ಹೇಳಿದ್ದಾರೆ.
ನಮ್ಮ ಲಸಿಕೆ ಸುರಕ್ಷಿತವಾಗಿದೆ ಹಾಗೂ ಲಸಿಕೆಗಳನ್ನು ಮನೆಗೆ ತರಲು ಬಳಸುವ ವ್ಯವಸ್ಥೆಯೂ ಸುರಕ್ಷಿತ ಹಾಗಾಗಿ ನಿಶ್ಚಿಂತೆಯಿಂದ ಲಸಿಕೆ ಪಡೆಯಬಹುದು ಎಂದಿದ್ದಾರೆ. ಹಾಸಿಗೆ ಹಿಡಿದಿರುವ ಅಥವಾ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಲಸಿಕೆ ಪಡೆಯಲು ಆಗಿಲ್ಲ. ಅಂಥವರಿಗೆ ಮನೆಗೆ ಬಂದು ಲಸಿಕೆ ನೀಡುತ್ತೇವೆ ಎಂದಿದ್ದಾರೆ.