ನವದೆಹಲಿ: ಇಂಟ್ರಾನಾಸಲ್ ‘ಕೊವ್ಯಾಕ್ಸಿನ್’ ಬೂಸ್ಟರ್ ಡೋಸ್ಗಳ ಪ್ರಯೋಗ ನಡೆಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದಿಂದ (ಡಿಸಿಜಿಐ) ಶುಕ್ರವಾರ ಅನುಮೋದನೆ ದೊರೆತಿದೆ.
ಇಂಟ್ರಾನಾಸಲ್ ಲಸಿಕೆ ಮೂಗಿನಲ್ಲಿ ಪ್ರತಿರಕ್ಷಣೆ ಸೃಷ್ಟಿಸಲಿದೆ. ಮೂಗು ವೈರಸ್ ಪ್ರವೇಶದ ಪ್ರಮುಖ ಮಾರ್ಗವಾಗಿದ್ದು, ಸೋಂಕು ಮತ್ತು ಹರಡುವಿಕೆಯನ್ನು ತಡೆಯುತ್ತದೆ ಎಂದು ಭಾರತ್ ಬಯೋಟೆಕ್ ಅಭಿಪ್ರಾಯಪಟ್ಟಿದೆ
ಭಾರತ್ ಬಯೋಟೆಕ್ ಸಂಸ್ಥೆಯು ಇಂಟ್ರಾನಾಸಲ್(ಮೂಗಿನ ಮೂಲಕ ನೀಡುವ) ಕೋವಿಡ್ ಬೂಸ್ಟರ್ ಡೋಸ್ ಅನ್ನು ಅಭಿವೃದ್ಧಿಪಡಿಸಿದೆ.