News Karnataka Kannada
Friday, May 03 2024
ದೇಶ

ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ 39 ರೂ ಇಳಿಕೆ

ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಕೊಂಚ ನಿರಾಳ ತರುವ ಸುದ್ದಿ ಇದು. ಎಲ್​ಪಿಜಿ ಗ್ಯಾಸ್ ಬೆಲೆಯಲ್ಲಿ ತುಸು ಇಳಿಕೆ ಆಗಿದೆ. 19 ಕಿಲೋ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ಬೆಲೆ 39 ರೂನಷ್ಟು ಕಡಿಮೆ ಆಗಿದೆ.
Photo Credit : News Kannada

ನವದೆಹಲಿ: ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಕೊಂಚ ನಿರಾಳ ತರುವ ಸುದ್ದಿ ಇದು. ಎಲ್​ಪಿಜಿ ಗ್ಯಾಸ್ ಬೆಲೆಯಲ್ಲಿ ತುಸು ಇಳಿಕೆ ಆಗಿದೆ. 19 ಕಿಲೋ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ಬೆಲೆ 39 ರೂನಷ್ಟು ಕಡಿಮೆ ಆಗಿದೆ.

ರಾಷ್ಟ್ರರಾಜಧಾನಿ ನಗರಿ ದೆಹಲಿಯಲ್ಲಿ 1796.50 ರೂ ಇದ್ದ ಕಮರ್ಷಿಯಲ್ ಸಿಲಿಂಡರ್ ಬೆಲೆ 1757.50 ರುಪಾಯಿಗೆ ಇಳಿದಿದೆ. ಬೆಂಗಳೂರು ಸೇರಿದಂತೆ ಎಲ್ಲಾ ಕಡೆಯೂ 19 ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಮುಖವಾಗಿದೆ. ಆದರೆ ಗೃಹಬಳಕೆಯ ಎಲ್​ಪಿಜಿ ಸಿಲಿಂಡರ್ ದರದಲ್ಲಿ ವ್ಯತ್ಯಯವಾಗಿಲ್ಲ.

ಎರಡೂವರೆ ತಿಂಗಳ ಅಂತರದಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್​ಗಳ ಬೆಲೆಯಲ್ಲಿ ನಾಲ್ಕು ಬಾರಿ ಬದಲಾವಣೆ ಆಗಿದೆ. ನವೆಂಬರ್ 1ರಂದು ನೂರು ರೂ ಗೂ ಹೆಚ್ಚು ಬೆಲೆ ಏರಿಕೆ ಆಗಿತ್ತು. ನವೆಂಬರ್ 16ರಂದು 50ಕ್ಕೂ ಹೆಚ್ಚು ರುಪಾಯಿಯಷ್ಟು ಬೆಲೆ ಇಳಿಸಲಾಯಿತು. ಡಿಸೆಂಬರ್ 1ರಂದು 21 ರೂನಷ್ಟು ಬೆಲೆ ಏರಿಕೆ ಆಯಿತು. ಬಳಿಕ ಇದೀಗ 39 ರೂ ಕಡಿಮೆ ಮಾಡಲಾಗಿದೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು