News Karnataka Kannada
Saturday, April 27 2024
ದೇಶ

ಏಪ್ರೀಲ್‌ 1ರಿಂದ ಹಣಕಾಸು ನಿಯಮಗಳಲ್ಲಿಆಗುವ ಪ್ರಮುಖ ಬದಲಾವಣೆಗಳಿವು

2023-24ರ ಹಣಕಾಸು ವರ್ಷ ಮುಗಿಯುತ್ತಿದೆ. 2024-25ರ ಹೊಸ ಹಣಕಾಸು ವರ್ಷ ಎಪ್ರಿಲ್ 1ರಂದು ಆರಂಭವಾಗುತ್ತದೆ. ಹೀಗಾಗಿ ಹೊಸ ಹಣಕಾಸು ನಿಯಮಗಳನ್ನು ಅಳವಡಿಸಲಾಗಿದೆ.ಆದಾಯ ತೆರಿಗೆ ನಿಯಮಗಳಿಂದ ಹಿಡಿದು ಫಾಸ್​ಟ್ಯಾಗ್​ವರೆಗೆ ಪ್ರಮುಖ ನಿಯಮ ಬದಲಾವಣೆ ಆಗಲಿದ್ದು ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
Photo Credit : NewsKarnataka

ಬೆಂಗಳೂರು:  2023-24ರ ಹಣಕಾಸು ವರ್ಷ ಮುಗಿಯುತ್ತಿದೆ. 2024-25ರ ಹೊಸ ಹಣಕಾಸು ವರ್ಷ ಎಪ್ರಿಲ್ 1ರಂದು ಆರಂಭವಾಗುತ್ತದೆ. ಹೀಗಾಗಿ ಹೊಸ ಹಣಕಾಸು ನಿಯಮಗಳನ್ನು ಅಳವಡಿಸಲಾಗಿದೆ.ಆದಾಯ ತೆರಿಗೆ ನಿಯಮಗಳಿಂದ ಹಿಡಿದು ಫಾಸ್​ಟ್ಯಾಗ್​ವರೆಗೆ ಪ್ರಮುಖ ನಿಯಮ ಬದಲಾವಣೆ ಆಗಲಿದ್ದು ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಎನ್​ಪಿಎಸ್ ನಿಯಮದಲ್ಲಿ ಬದಲಾವಣೆ
ಎನ್​ಪಿಎಸ್ ಖಾತೆಗಳಿಗೆ ಲಾಗಿನ್ ಆಗಲು ಎರಡು ಎಳೆಯ ಭದ್ರತಾ ವ್ಯವಸ್ಥೆ ಇದೆ. ಇಲ್ಲಿಯವರೆಗೂ ನ್ಯಾಷನಲ್ ಪೆನ್ಷನ್ ಸಿಸ್ಟಂ ಅಕೌಂಟ್​ಗೆ ಲಾಗಿನ್ ಆಗಲು ಯೂಸರ್ ಐಡಿ ಮತ್ತು ಪಾಸ್ವರ್ಡ್ ಬೇಕಿತ್ತು. ಈಗ ಆಧಾರ್ ದೃಢೀಕರಣವನ್ನೂ ಪಡೆಯಬೇಕಾಗುತ್ತದೆ.

ಇಪಿಎಫ್​ಒ ಹೊಸ ನಿಯಮ
ಇಪಿಎಫ್ ಸದಸ್ಯರು ತಮ್ಮ ಕೆಲಸ ಬದಲಾವಣೆ ಮಾಡಿದಾಗ ಅವರ ಖಾತೆಯಲ್ಲಿರುವ ಹಣ ಹೊಸ ಸಂಸ್ಥೆಯ ಪಿಎಫ್ ಖಾತೆಗೆ ಸ್ವಯಂ ಆಗಿ ವರ್ಗಾವಣೆ ಆಗುತ್ತದೆ. ಇದರಿಂದ ಉದ್ಯೋಗಿಗಳ ಒಂದು ತಲೆನೋವು ಕಡಿಮೆ ಆಗುತ್ತದೆ. ಈಗಿರುವ ವ್ಯವಸ್ಥೆಯಲ್ಲಿ ಒಂದಕ್ಕಿಂತ ಹೆಚ್ಚು ಪಿಎಫ್ ಖಾತೆಗಳಿದ್ದರೆ ಅದನ್ನು ವಿಲೀನಗೊಳಿಸಲು ಇಪಿಎಫ್ ಸಬ್​ಸ್ಕ್ರೈಬರ್​ಗಳು ಮನವಿ ಸಲ್ಲಿಸಬೇಕಾಗಿದೆ.

ಫಾಸ್​ಟ್ಯಾಗ್ ನಿಯಮ
ಫಾಸ್​ಟ್ಯಾಗ್ ಇದ್ದಲ್ಲಿ ಅದರ ಕೆವೈಸಿಯನ್ನು ನೀವು ಅಪ್​ಡೇಟ್ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಬ್ಯಾಂಕುಗಳು ನಿಮ್ಮ ಫಾಸ್​ಟ್ಯಾಗ್ ಅನ್ನು ಡೀ ಆ್ಯಕ್ಟಿವೇಟ್ ಮಾಡುವ ಸಾಧ್ಯತೆ ಇದೆ. ಕೆವೈಸಿ ಅಪ್​ಡೇಟ್ ಆಗದ ಫಾಸ್​ಟ್ಯಾಗ್​ನ ಖಾತೆಯಲ್ಲಿ ಹಣ ಇದ್ದರೂ ಅದು ಕೆಲಸ ಮಾಡುವುದಿಲ್ಲ. ಆದ್ದರಿಂದ ಕೆವೈಸಿ ಅಪ್​ಡೇಟ್ ಮಾಡಿರದಿದ್ದರೆ ಮಾರ್ಚ್ 31ರೊಳಗೆ ಅದನ್ನು ಮಾಡಿರಿ.

ಹೊಸ ಇನ್ಕಮ್ ಟ್ಯಾಕ್ಸ್ ಪದ್ಧತಿ ಡೀಫಾಲ್ಟ್?
2023-24ರ ಹಣಕಾಸು ವರ್ಷದಿಂದ ಸರ್ಕಾರ ಹಳೆಯ ತೆರಿಗೆ ಪದ್ಧತಿ ಜೊತೆಗೆ ಹೊಸ ಆದಾಯ ತೆರಿಗೆ ಪದ್ಧತಿಯನ್ನೂ ಸೇರಿಸಿದೆ. ಹೊಸ ಟ್ಯಾಕ್ಸ್ ರೆಜಿಮೆ ಡೀಫಾಲ್ಟ್ ಆಗಿರಲಿದೆ. ನೀವು ಈಗಾಗಲೇ ಓಲ್ಡ್ ಟ್ಯಾಕ್ಸ್ ರೆಜಿಮೆಯಲ್ಲಿಯೇ ಇದ್ದರೆ ಹೊಸ ಹಣಕಾಸು ವರ್ಷಕ್ಕೂ ಅದರಲ್ಲೇ ಮುಂದುವರಿಸಬಹುದು. ಒಂದು ವೇಳೆ ನೀವು ಓಲ್ಡ್ ಟ್ಯಾಕ್ಸ್ ರೆಜಿಮೆ ಆಯ್ಕೆ ಮಾಡಿಕೊಳ್ಳದೇ ಇದ್ದಲ್ಲಿ ಹೊಸ ತೆರಿಗೆ ಪದ್ಧತಿಯೇ ಡೀಫಾಲ್ಟ್ ಆಗಿರುತ್ತದೆ. ಒಮ್ಮೆ ನೀವು ಹೊಸ ತೆರಿಗೆ ಪದ್ಧತಿಯಲ್ಲಿ ರಿಟರ್ನ್ ಫೈಲ್ ಮಾಡಿದರೆ ಅದರಲ್ಲೇ ಮುಂದುವರಿಯಬೇಕಾಗುತ್ತದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು