News Karnataka Kannada
Thursday, May 02 2024
ಬಿಹಾರ

ರಾಜಕೀಯಕ್ಕೆ ಕಾಲಿಟ್ಟ ಬಾಲಿವುಡ್‌ ನಟಿ ನೇಹಾ ಶರ್ಮಾ

ಈ ಬಾರಿಯ ಲೋಕಸಭಾ ಚುನಾವಣೆಗೆ ವಿಷೇಶ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ ಅದರಲ್ಲೂ ನಟ, ನಟಿಯರು ಸರ್ಕಾರಿ ಅಧಿಕಾರಿಗಳು. ಹಾಗಾಗಿ ಈ ಬಾರಿಯ ಚುನಾವಣೆ ಕುತೂಹಲ ಹೆಚ್ಚಿಸಿದೆ. ಇದೀಗ ಬಾಲಿವುಡ್‌ ಬೆಡಗಿ ನೇಹಾ ಶರ್ಮಾ ಅವರು ಲೋಕಸಭಾ ಚುನಾವಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
Photo Credit : NewsKarnataka

ಈ ಬಾರಿಯ ಲೋಕಸಭಾ ಚುನಾವಣೆಗೆ ವಿಷೇಶ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ ಅದರಲ್ಲೂ ನಟ, ನಟಿಯರು ಸರ್ಕಾರಿ ಅಧಿಕಾರಿಗಳು. ಹಾಗಾಗಿ ಈ ಬಾರಿಯ ಚುನಾವಣೆ ಕುತೂಹಲ ಹೆಚ್ಚಿಸಿದೆ. ಇದೀಗ ಬಾಲಿವುಡ್‌ ಬೆಡಗಿ ನೇಹಾ ಶರ್ಮಾ ಅವರು ಲೋಕಸಭಾ ಚುನಾವಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ನಟಿ ನೇಹಾ ಶರ್ಮಾ ಬಿಹಾರದ ಭಾಗಲಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರೂ ಆಗಿರುವ ನೇಹಾ ಅವರ ತಂದೆ ಅಜಯ್ ಶರ್ಮಾ ಮಗಳಿಗಾಗಿ ಟಿಕೆಟ್ ಕೊಡಿಸಲಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಸದ್ಯ ಭಾಗಲ್‌ಪುರ ಕ್ಷೇತ್ರ ಜೆಡಿಯು ವಶದಲ್ಲಿದೆ ಈಗಾಗಲೇ ಕಾಂಗ್ರೆಸ್ ಹಲವು ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಭಾಗಲಪುರ ಕ್ಷೇತ್ರವನ್ನು ನಮಗೆ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಬಾಲಿವುಡ್‌ ಕ್ಷೇತ್ರದಲ್ಲಿ ಖ್ಯಾತಿ ಪಡೆದಿರುವ ನೇಹಾ ಶರ್ಮಾ ಇದೀಗ ಕಣಕ್ಕಿಳಿದು ಯುವಸಮುದಾಯದಿಂದ ಹೆಚ್ಚಿನ ಮತ ಪಡೆಯುವ ಉದ್ದೇಶದಲ್ಲಿದ್ದಾರೆ ಎನ್ನಲಾಗಿದೆ.

2007ರಲ್ಲಿ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿ ಕ್ರೂಕ್‌,ತಾನಾಜಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಪಡೆದಿದ್ದಾರೆ. ಅಲ್ಲದೆ ‘ಜೋಗಿರಾ ಸಾರಾ ರಾರಾ’ ಚಿತ್ರದ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡ ನೇಹಾ ಶರ್ಮಾ ಬಾಲಿವುಡ್‌ನಲ್ಲಿ ಸಕ್ರಿಯವಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು