News Karnataka Kannada
Monday, April 29 2024
ಬಿಹಾರ

ಬಿಹಾರ| ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ: ಸಿಡಿಲು ಬಡಿತಕ್ಕೆ 16 ಜನರು ಸಾವು

Sidilu
Photo Credit :

ಬಿಹಾರ: ನಿನ್ನೆ ಬಿಹಾರದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಮಂಗಳವಾರ (ಜೂನ್ 28,2022) ರಂದು ಸಿಡಿಲು ಬಡಿತಕ್ಕೆ 16 ಜನರು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ನಾಲ್ಕು, ಭೋಜ್‌ಪುರ ಜಿಲ್ಲೆಯಲ್ಲಿ ಮೂರು, ಸರನ್ ಜಿಲ್ಲೆಯಲ್ಲಿ ಮೂರು, ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಎರಡು, ಅರಾರಿಯಾ ಜಿಲ್ಲೆಯಲ್ಲಿ ಇಬ್ಬರು, ಬಂಕಾ ಮತ್ತು ಮುಜಾಫರ್‌ಪುರ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಸಿಎಂ ನಿತೀಶ್ ಕುಮಾರ್ ಸಂತಾಪ ಸೂಚಿಸಿದ್ದಾರೆ.  ಕುಟುಂಬಗಳಿಗೆ ನಿತೀಶ್ ಕುಮಾರ್ ಸಾಂತ್ವನ ಹೇಳಿದ್ದು,  ಕುಟುಂಬಗಳಿಗೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.

ಜೂನ್ 18 ಮತ್ತು 19 ರಂದು ಬಿಹಾರದಾದ್ಯಂತ ಸಿಡಿಲು ಬಡಿದು 17 ಜನರು ಸಾವನ್ನಪ್ಪಿದ್ದರು. ಜೂನ್ ತಿಂಗಳೊಂದರಲ್ಲೇ ಬಿಹಾರದಲ್ಲಿ ಸಿಡಿಲು ಬಡಿದು 36 ಮಂದಿ ಸಾವನ್ನಪ್ಪಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು