News Karnataka Kannada
Monday, April 29 2024
ಬಿಹಾರ

ಬಿಹಾರ: ಬಿಸಿಲಿನ ತೀವ್ರತೆಯಿಂದ 27 ಮಂದಿ ಸಾವು

Mangaluru records highest temperature in the country
Photo Credit : News Kannada

ಪಾಟ್ನಾ: ಬಿಹಾರದಲ್ಲಿ ಬಿಸಿಲಿನ ತೀವ್ರತೆಯಿಂದ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ. ಭೋಜ್‌ಪುರ ಜಿಲ್ಲೆಯಲ್ಲಿ ಆರು ಮಂದಿ, ರೋಹ್ತಾಸ್, ಬಂಕಾ ಮತ್ತು ಅರ್ವಾಲ್‌ನಲ್ಲಿ ತಲಾ ನಾಲ್ವರು, ಔರಂಗಾಬಾದ್‌ನಲ್ಲಿ ಮೂವರು ಮತ್ತು ನಲಂದಾ, ಜಮುಯಿ, ಜಹಾನಾಬಾದ್, ಭಾಗಲ್ಪುರ, ಗಯಾ ಮತ್ತು ಪಾಟ್ನಾದಲ್ಲಿ ತಲಾ ಒಬ್ಬರು ಬಿಸಿಗಾಳಿಗೆ ಸಾವನ್ನಪ್ಪಿದ್ದಾರೆ.

ಶನಿವಾರ ಪಾಟ್ನಾದಲ್ಲಿ ಗರಿಷ್ಠ ತಾಪಮಾನ 44.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಶೇಖ್‌ಪುರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ 45.1 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಮುಂದಿನ 24 ಗಂಟೆಗಳ ಕಾಲ ಬಿಸಿಗಾಳಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶನಿವಾರ ಸಸಾರಂ ರೈಲು ನಿಲ್ದಾಣದಲ್ಲಿ ಬಿಸಿಲಿನ ಝಳದಿಂದ ಇಬ್ಬರು ಸಾವನ್ನಪ್ಪಿದ್ದಾರೆ.

ಪ್ಲಾಟ್‌ಫಾರ್ಮ್ ಸಂಖ್ಯೆ 7ರಲ್ಲಿ ರೈಲಿಗಾಗಿ ಕಾಯುತ್ತಿದ್ದಾಗ ಒಬ್ಬ ವ್ಯಕ್ತಿ ಸಾವನ್ನಪ್ಪಿದರೆ, ಮತ್ತೊಬ್ಬ ಪ್ರಯಾಣಿಕ ರೈಲು ನಿಲ್ದಾಣದ ಪ್ರವೇಶ ದ್ವಾರದಲ್ಲಿ ಸಾವನ್ನಪ್ಪಿದ್ದಾನೆ. ಏತನ್ಮಧ್ಯೆ, 12 ನೇ ತರಗತಿವರೆಗಿನ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಜೂನ್ 24 ರವರೆಗೆ ಮುಚ್ಚುವಂತೆ ಪಾಟ್ನಾ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು