ಪಾಟ್ನಾ: ಬಿಹಾರದ ಕಿಶನ್ಗಂಜ್ ಜಿಲ್ಲೆಯಲ್ಲಿ ಅಗುವಾನಿ ಘಾಟ್ ಖಗಾರಿಯಾ ಸೇತುವೆ ಕುಸಿದ ಬೆನ್ನಲ್ಲೇ ಮತ್ತೊಂದು ಸೇತುವೆಯ ಒಂದು ಭಾಗ ಕುಸಿದಿದೆ.
ಕಟಿಹಾರ್ ಮತ್ತು ಕಿಶನ್ಗಂಜ್ ಜಿಲ್ಲೆಗಳನ್ನು ಸಂಪರ್ಕಿಸುವ ಎನ್ಎಚ್ 327 ಇ ನಲ್ಲಿ ಗೋರಿ ಗ್ರಾಮದ ಬಳಿ ಮೇಚಿ ನದಿಗೆ ಸೇತುವೆಯನ್ನು ನಿರ್ಮಿಸಲಾಗಿದೆ. ಇದೀಗ ಆ ಸೇತುವೆ ಕುಸಿದಿದ್ದು, ಸೇತುವೆ ಕುಸಿದ ನಂತರ, ಜಿಲ್ಲಾಡಳಿತ ಸಂಚಾರವನ್ನು ನಿಷೇಧಿಸಿದೆ. ಸೇತುವೆಯ ಮೇಲೆ ವಾಹನ ಸಂಚಾರ ತಡೆಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಜೂನ್ 4 ರಂದು ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದಿತ್ತು.