News Karnataka Kannada
Friday, May 03 2024
ಬಿಹಾರ

ಭಾರತದ ಸಂವಿಧಾನ ಬದಲಿಸಲು ಬಿಜೆಪಿ ಬಹುಮತ ಕೇಳುತ್ತಿದೆ: ಖರ್ಗೆ

ನಮಗೆ ಬಹುಮತ ಬಂದರೆ ಬಾರತದ ಸಂವಿಧಾನವನ್ನು ಬದಲಿಸುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ ನಾವು ಜನರ ಕಷ್ಟಗಳನ್ನು ದೂರಮಾಡಬಯಸುತ್ತೇವೆ ಎಂದು ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
Photo Credit : NewsKarnataka

ಬಿಹಾರ್:‌ ನಮಗೆ ಬಹುಮತ ಬಂದರೆ ಬಾರತದ ಸಂವಿಧಾನವನ್ನು ಬದಲಿಸುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ ನಾವು ಜನರ ಕಷ್ಟಗಳನ್ನು ದೂರಮಾಡಬಯಸುತ್ತೇವೆ ಎಂದು ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ʼಮೋದಿ ಎಲ್ಲರನ್ನೂ ಹೆದರಿಸುತ್ತಿದ್ದಾರೆ. ಇಡಿ, ಆದಾಯ ತೆರಿಗೆ ಇಲಾಖೆಗಳನ್ನು ಹಣದಿಂದ ಅಥವ ಹೆದರಿಸಿ ಬಿಜೆಪಿ ತನ್ನ ಕಡೆ ಮಾಡಿಕೊಂಡಿದೆʼ ಎಂದು ಆರೋಪಿಸಿದ ಖರ್ಗೆ, ಕರ್ನಾಟಕ, ಮಧ್ಯಪ್ರದೇಶ, ಗೋವಾ, ಉತ್ತರಾಖಂಡದ ಜನರು ಅವರನ್ನು ಬೆಂಬಲಿಸಲಿಲ್ಲ. ಆದರೆ ಅವರು ಎಲ್ಲರ ಒಗ್ಗಟ್ಟನ್ನು ಮುರಿದು ತಮ್ಮ ಇಷ್ಟದಂತೆ ನಡೆದುಕೊಂಡಿದ್ದಾರೆ ಎಂದರು.

ಆರ್.ಎಸ್.ಎಸ್‌ ಮುಖಂಡರು ಹಾಗು ಬಿಜೆಪಿಯ ಕೆಲ ನಾಯಕರು ಸಂವಿಧಾನ ಬದಲಾವಣೆಯ ಬಗ್ಗೆ ಮಾತಾಡುವಾಗ ಮೋದಿ ಯಾಕೆ ಸುಮ್ಮನಿರುತ್ತಾರೆ ಎಂದು ಪ್ರಶ್ನಿಸಿದ ಖರ್ಗೆ, ಯಾರಾದರೂ ಇಂತಹ ಮಾತುಗಳನ್ನಾಡಿದರೆ ಅವರಿಗೆ ತಕ್ಕ ಉತ್ತರ ನೀಡಿ ಎಂದು ಜನರಿಗೆ ಕರೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು