News Karnataka Kannada
Tuesday, April 30 2024
ಬಿಹಾರ

ಬಿಹಾರ: ಭಾಗಲ್ಪುರದಲ್ಲಿ ಪ್ರಬಲ ಸ್ಫೋಟ 7 ಸಾವು, 8 ಮಂದಿಗೆ ಗಾಯ

Fire
Photo Credit :

ಪಟ್ನಾ: ಬಿಹಾರದ ಬಾಗಲ್‌ಪುರ್ ಜಿಲ್ಲೆಯಲ್ಲಿ ಮನೆಯೊಂದರಲ್ಲಿ ಅಕ್ರಮವಾಗಿ ಬಾಂಬ್ ತಯಾರಿಸಲು ಇಟ್ಟಿದ್ದ ಪ್ರಬಲ ಸ್ಪೋಟಕ ಸಿಡಿದು 11 ಜನ ಮೃತಪಟ್ಟಿರುವ ಘಟನೆ  ನಡೆದಿದೆ.ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಸಾವು ನೋವಿನ ಪ್ರಮಾಣ ಹೆಚ್ಚಾಗುವ ಸಂಭವವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ರಾತ್ರಿ ತಾತಾರ್‌ಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಜ್‌ವಾಲಿ ಚಾಕ್ ಎಂಬ ಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ.ಸ್ಪೋಟ ಎಷ್ಟು ಪ್ರಬಲವಾಗಿತ್ತೆಂದರೆ ಘಟನೆ ನಡೆದ ಸ್ಥಳದಿಂದ 15 ಕಿಮೀ ದೂರದಲ್ಲಿರುವ ನಾಲ್ಕು ಮನೆಗಳು ಕುಸಿದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಗಲ್‌ಪುರ್ ವಲಯದ ಡಿಜಿಪಿ ಹಾಗೂ ಎಸ್‌ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ‘ಅಕ್ರಮವಾಗಿ ನಾಡ ಬಾಂಬ್ ತಯಾರಿಸಲು ಇಟ್ಟಿದ್ದ ಸಲಕರಣೆಗಳು ಸ್ಫೋಟಿಸಿವೆ.

ಇದೊಂದು ಭಾರೀ ಪ್ರಮಾಣದ ಸ್ಪೋಟ’ ಎಂದು ಡಿಜಿಪಿ ಸುಜಿತ್ ಕುಮಾರ್ ಹೇಳಿದ್ದಾರೆ.’ಗಾಯಾಳುಗಳನ್ನು ಮಾಯಾಗಂಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಪೋಟ ನಡೆದ ಸ್ಥಳದ ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆ ನಡೆದಿದೆ. ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು’ ಎಂದು ಕುಮಾರ್ ಮಾಹಿತಿ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು