News Karnataka Kannada
Friday, May 17 2024
ಸಾಂಡಲ್ ವುಡ್

ನಟಿಗೆ ಅಶ್ಲೀಲ ಮೆಸೇಜ್​ ಕಳಿಸಿದ ಆರೋಪ: ಆಡಂ ಬಿದ್ದಪ್ಪ ಪೊಲೀಸ್ ವಶಕ್ಕೆ

Photo Credit :

ಬೆಂಗಳೂರು : ನಟಿ ಸಂಜನಾ ಗಲ್ರಾಣಿ ಅವರಿಗೆ ಅಶ್ಲೀಲ ಸಂದೇಶಗಳನ್ನು ರವಾನಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರ ಆಡಂ ಬಿದ್ದಪ್ಪ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಡಂ ಬಿದ್ದಪ್ಪ, ಫೆ.25ರಂದು ರಾತ್ರಿ 10-12 ಗಂಟೆ ವೇಳೆ ನಟಿ ಸಂಜನಾ ಗಲ್ರಾಣಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಂಜನಾ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಲ್ಲದೇ ವಾಟ್ಸಪ್ ಮೆಸೇಜ್ ದಾಖಲೆಗಳನ್ನು ನೀಡಿದ್ದರು. ಅಶ್ಲೀಲ ಸಂದೇಶ ಹಾಗೂ ಅವಾಚ್ಯ ಪದ ಬಳಕೆ ಮಾಡುತ್ತಿರುವ ಆಡಂ ಬಿದ್ದಪ್ಪ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಸಂಜನಾ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಆಡಂ ಬಿದ್ದಪ್ಪ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ. ಆದರೆ ಆಡಂ ತನ್ನ ಮೊಬೈಲ್ ನ ವಾಟ್ಸಪ್ ಸಂದೇಶಗಳನ್ನು ಡಿಲಿಟ್ ಮಾಡಿರುವುದಲ್ಲದೇ, ತಾನು ಅಶ್ಲೀಲ ಸಂದೇಶ ಕಳುಹಿಸಿಲ್ಲ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಆಡಂ ಹಾಗೂ ಆತನ ಮೊಬೈಲ್ ನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು