News Karnataka Kannada
Tuesday, May 07 2024
ಬಿಹಾರ

ಪಾಟ್ನಾ: ಮೂರೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿದ ತಾತ

No Rape
Photo Credit :

ಪಾಟ್ನಾ(ಡಿ. 20) : ಇಡೀ ಸಮಾಜವೇ ತಲೆತಗ್ಗಿಸುವಂತಹ ಪ್ರಕರಣವೊಂದು ಪಾಟ್ನಾದಿಂದ ವರದಿಯಾಗಿದೆ. ಬಿಹಾರದ ಹಾಜಿಪುರ ಪಟ್ಟಣದಲ್ಲಿ 60 ವರ್ಷದ ವ್ಯಕ್ತಿಯೊಬ್ಬ ತನ್ನ ಸಂಬಂಧಿಯ (ಸೊಸೆ) ಮೂರೂವರೆ ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ.

ಡಿಸೆಂಬರ್ 16 ರಂದೇ ಎಸಗಿರುವ ಕೃತ್ಯ ಶನಿವಾರ ಬೆಳಕಿಗೆ ಬಂದಿದೆ. ಬಾಲಕಿಯ ತಾಯಿ  ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ 60 ವರ್ಷದ ಆರೋಪಿಯನ್ನು ಪೊಲೀಸರು ಭಾನುವಾರ  ಬಂಧಿಸಿದ್ದಾರೆ.

ದೂರು ನೀಡಿದ ಮಹಿಳೆ ಆರೋಪಿಗೆ ಸಂಬಂಧದಲ್ಲಿ ಹಿರಿಯ ಸೊಸೆಯಾಗಬೇಕು. ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಲು ವೃದ್ಧ ಹಾಜಿಪುರಕ್ಕೆ ಬಂದಿದ್ದ. ಡಿಸೆಂಬರ್ 16 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಮನೆಯ ಟೆರೆಸ್ ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ವೃದ್ಧ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಗುವಿನ ಖಾಸಗಿ ಅಂಗಗಳಿಗೆ ಗಾಯಗಳಾಗಿವೆ. ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಸದರ್ ಎಸ್‌ಡಿಪಿಒ ರಾಘವ್ ದಯಾಳ್ ವಿವರಣೆ ನೀಡಿದ್ದು, ಮೊದಲು ಕುಟುಂಬದವರು ವಿಷಯನ್ನು ಮುಚ್ಚಿಡಲು ಯತ್ನಿಸಿದ್ದರು. ಆದರೆ ಬಾಲಕಿಯ ತಾಯಿ ಮುಂದೆ ಬಂದು ದೂರು ನೀಡಿದ್ದಾರೆ. ಅವರ ದೂರಿನ ಆಧಾರದಲ್ಲಿ ಆರೋಪಿಯನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.

ಪ್ರಕರಣದ ತನಿಖೆಯನ್ನು ಪ್ರಾರಂಭಿಸಲಾಗಿದೆ. ಹುಡುಗಿಯ ತಾಯಿ ರಕ್ತಸಿಕ್ತ ಬಟ್ಟೆ, ದಿಂಬು ಮತ್ತು ಬೆಡ್‌ಶೀಟ್‌ಗಳನ್ನ ನೀರಿನಲ್ಲಿ ತೊಳೆದು ಬಿಟ್ಟಿದ್ದಳು. ಹಾಗಾಗಿ ಘಟನೆ ನಡೆದ ಜಾಗದಿಂದ ಯಾವುದೇ ಸಾಕ್ಷ್ಯ ಕಲೆಹಾಕಲು ಸಾಧ್ಯವಾಗಿಲ್ಲ ಎಂದು ಎಂದು ಮಹಿಳಾ ಪೊಲೀಸ್ ಠಾಣೆ ಎಸ್‌ಎಚ್‌ಒ ಪುಷ್ಪಾ ಕುಮಾರಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು