News Karnataka Kannada
Thursday, May 02 2024
ಅಸ್ಸಾಂ

ಕಾಮಾಖ್ಯ ದೇವಳಕ್ಕೆ ರೋಪ್‌ ವೇ: ಹಿಮಂತ ಬಿಸ್ವಾ ಶರ್ಮಾ ಮಾಹಿತಿ

Ropeway to Kamakhya temple: Himanta Biswa Sarma
Photo Credit : IANS

ಗುವಾಹಟಿ: ಗುವಾಹಟಿಯ ನಿಲಾಚಲ ಬೆಟ್ಟಗಳ ಮೇಲಿರುವ ಪ್ರಸಿದ್ಧ ಕಾಮಾಖ್ಯ ದೇವಸ್ಥಾನದಲ್ಲಿ ರೋಪ್‌ವೇ ನಿರ್ಮಿಸಲು ಅಸ್ಸಾಂ ಸರ್ಕಾರ ಯೋಜಿಸಿದೆ. ಗುರುವಾರ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಕಾಮಾಖ್ಯ ರೈಲು ನಿಲ್ದಾಣದಿಂದ ದೇವಸ್ಥಾನದವರೆಗೆ ರೋಪ್‌ವೇ ಸೇವೆ ಆರಂಭಿಸಲು ಸರ್ಕಾರವು ಈಗಾಗಲೇ ಅಧ್ಯಯನವನ್ನು ನಡೆಸಿದೆ ಎಂದು ತಿಳಿಸಿದ್ದಾರೆ.

ರೋಪ್‌ವೇ ನಿರ್ಮಾಣವಾದಲ್ಲಿ ಪ್ರಯಾಣ ಸಮಯ ಸಾಕಷ್ಟು ಕಡಿಮೆಯಾಗಲಿದೆ. ಅಲ್ಲದೆ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ ಎಂದು ಸಿಎಂ ಹೇಳಿದ್ದಾರೆ. ಪ್ರತಿ ಗಂಟೆಗೆ 1,000 ಜನರನ್ನು ಸಾಗಿಸುವ ಸಾಮರ್ಥ್ಯದೊಂದಿಗೆ, ರೋಪ್‌ ವೇ ಕಾರ್ಯನಿರ್ವಹಿಸಲಿದೆ ಎಂದು ಸಿಎಂ ಹೇಳಿದ್ದಾರೆ. ಇದು ನಿಲಾಚಲ ಬೆಟ್ಟಗಳನ್ನು ಏಳು ನಿಮಿಷಗಳಲ್ಲಿ ಕ್ರಮಿಸುತ್ತದೆ. ರೋಪ್‌ವೇ 2026ರಲ್ಲಿ ಪೂರ್ಣಗೊಳ್ಳಲಿದೆ ಎಂದು ಸಿಎಂ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು