ಆಂಧ್ರಪ್ರದೇಶ : ಆಂಧ್ರಪ್ರದೇಶದಲ್ಲಿ ಮರುಬಳಕೆ ವಸ್ತುಗಳನ್ನು ಬಳಸಿ ಪ್ರಧಾನಿ ಮೋದಿಯವರ 14 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಗುಂಟೂರಿನ ತೆನಾಲಿಯ ವೆಂಕಟೇಶ್ವರ್ ರಾವ್ ಹಾಗೂ ಅವರ ಪುತ್ರ ರವಿ ನೇತೃತ್ವದಲ್ಲಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಈ ಪ್ರತಿಮೆಯನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡಲಾಗುವುದು.
10 ರಿಂದ 15 ಮಂದಿ ಎರಡು ತಿಂಗಳು ಪ್ರತಿಮೆ ಮೇಲೆ ಕೆಲಸ ಮಾಡಿದ್ದಾರೆ. ಆಟೋಮೊಬೈಲ್ ಕಂಪನಿಗಳು ರದ್ದಿಗೆ ಹಾಕಿದ್ದ ವಸ್ತುಗಳನ್ನು ಬಳಸಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಲೋಹದ ಚೈನ್, ಚಕ್ರ, ನಟ್ ಹಾಗೂ ಬೋಲ್ಟ್ಗಳನ್ನು ಬಳಸಲಾಗಿದೆ.