ಫೋರ್ಟ್ಬ್ಲೇರ್, ; ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಕೊರೊನಾ ಸಂಪೂರ್ಣ ನಿಯಂತ್ರಣದಲ್ಲಿದ್ದು, ಭಾನುವಾರ ಆರೋಗ್ಯ ಇಲಾಖೆ ವರದಿಯಲ್ಲಿ ಒಂದೇ ಒಂದು ಸೋಂಕಿತರು ಕೂಡ ಪತ್ತೆಯಾಗಿಲ್ಲ. ಕೇಂದ್ರಾಡಳಿತ ಪ್ರದೇಶವಾದ ಈ ದ್ವೀಪದಲ್ಲಿ ಈವರೆಗೆ 7,557 ಜನರು ಕೊರೊನಾ ಸೋಂಕಿಗೆ ಬಾಧಿತರಾಗಿದ್ದಾರೆ.
ದಕ್ಷಿಣ ಅಂಡಮಾನ್ ಜಿಲ್ಲೆಯಲ್ಲಿ 8 ಹಾಗೂ ಉತ್ತರ -ಕೇಂದ್ರ ಇತರೆ ಎರಡು ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು ವರದಿಯಾಗಿದೆಯೇ ಹೊರತು ಹೊಸ ಸೋಂಕಿತರು ದಾಖಲಾಗಿಲ್ಲ. ಅಂಡಮಾನ್-ನಿಕೋಬಾರ್ ಕೊರೊನಾ ಮುಕ್ತ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ 129 ಮಂದಿ ಇಲ್ಲಿ ಸಾವನ್ನಪ್ಪಿದ್ದು , ಸೋಂಕಿನಿಂದ 7,420 ಮಂದಿ ಗುಣಮುಖರಾಗಿದ್ದಾರೆ ಎಂದು ಹೇಳಿದ್ದಾರೆ.
ಕೊರೋನ ಮುಕ್ತವಾದ ಅಂಡಮಾನ್ ನಿಕೋಬಾರ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.