News Karnataka Kannada
Wednesday, April 24 2024
Cricket
ದೇಶ

ಆಸ್ಪತ್ರೆಯ ಐಸಿಯುಗೆ ಬೆಂಕಿ: 47 ಮಕ್ಕಳು ಪವಾಡಸದೃಶ ರೀತಿಯಲ್ಲಿ ಪಾರು

Jaipur hospital
Photo Credit : IANS

ಜೈಪುರ: ರಾಜಸ್ಥಾನ ಸರ್ಕಾರ ನಡೆಸುತ್ತಿರುವ ಮಕ್ಕಳ ಅತಿದೊಡ್ಡ ಆಸ್ಪತ್ರೆಯಾದ ಜೈಪುರದ ಜೆಕೆ ಲೋನ್ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 47 ಮಕ್ಕಳು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಸೋಮವಾರ ತಡರಾತ್ರಿ ಎಸಿ ಡಕ್ಟ್ ಲೈನ್ ನಿಂದ ಹೊರಬರುವ ಹೊಗೆ ಮಕ್ಕಳನ್ನು ಸುತ್ತುವರೆದಾಗ, ಅವರ ಪೋಷಕರು ಆಸ್ಪತ್ರೆಯ ಸಿಬ್ಬಂದಿಯ ಸಹಾಯದಿಂದ ಮಕ್ಕಳನ್ನು ಹೊರಗೆ ಕರೆದೊಯ್ದಿದ್ದಾರೆ.

ಇನ್ನು ಹೊಗೆಯನ್ನು ಹೊರಹಾಕಲು ಆಸ್ಪತ್ರೆಯಲ್ಲಿನ ಕಿಟಕಿ ಗಾಜುಗಳನ್ನು ಒಡೆದು ಹಾಕಲಾಗಿದೆ. ಬಳಿಕ ವಿದ್ಯುತ್ ಸರಬರಾಜು ನಿಲ್ಲಿಸಲಾಗಿದೆ. ಕೆಲವು ಮಕ್ಕಳು ಆಮ್ಲಜನಕದ ಮೇಲೆ ಮಲಗಿದ್ದರು.  ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ರವಿಕಾಂತ್ ಮಂಗಳವಾರ ಬೆಳಿಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಗೆ ಆದೇಶಿಸಿದ್ದಾರೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು