ನವದೆಹಲಿ: 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಗಾಗಿ ನಾವು ಈಗಿಂದಲೆ ಸಿದ್ಧತೆ ಆರಂಭಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಹೇಳಿದ್ದಾರೆ.
ವಿರೋಧ ಪಕ್ಷಗಳ ಮುಖಂಡರೊಂದಿಗೆ ಶುಕ್ರವಾರ ನಡೆಸಿದ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, ‘ಸಂವಿಧಾನದ ಆಶಯ-ತತ್ವಗಳಲ್ಲಿ ನಂಬಿಕೆ ಹೊಂದಿರುವಂತಹ ಸರ್ಕಾರ ರಚನೆಯೇ ನಮ್ಮ ಗುರಿಯಾಗಿರಬೇಕು. ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಸರ್ಕಾರ ರಚಿಸುವುದು ಸವಾಲೇ ಆದರೂ ನಾವೆಲ್ಲಾ ಒಗ್ಗಟ್ಟಿನಿಂದ ಹೋರಾಡಿದರೆ ಇದನ್ನು ಸಾಧಿಸಬಹುದು. ನಮಗೆ ನಮ್ಮವೇ ಆದ ಬಾಧ್ಯತೆಗಳು, ಮಿತಿಗಳು ಇವೆ. ಆದರೆ, ರಾಷ್ಟ್ರದ ಹಿತದೃಷ್ಟಿಯಿಂದ ನಾವೆಲ್ಲಾ ಇಂತಹ ಮಿತಿಗಳನ್ನು ಮೀರಿ ಒಂದುಗೂಡುವುದು ಅಗತ್ಯವಿದೆ. ಅಂಥ ಸಮಯ ಈಗ ಬಂದಿದೆ ಎಂದು ಹೇಳಿದರು.