News Karnataka Kannada
Monday, April 29 2024
ದೇಶ

ವಿಮಾನ ಯಾನ ಭಾರಿ ದುಬಾರಿ

Britan Plane 09082021
Photo Credit :
ನವದೆಹಲಿ : ಭಾರತದಲ್ಲಿ ಕೋವಿಡ್‌ ಪರಿಸ್ಥಿತಿ ಸುಧಾರಿಸಿದ ಬೆನ್ನಲ್ಲೇ  ಹಲವು ದೇಶಗಳು ಭಾರತದ ನಾಗರಿಕರ ಮೇಲೆ ಹೇರಿದ್ದ ಪ್ರಯಾಣದ ನಿರ್ಬಂಧಗಳನ್ನು ತೆರವುಗೊಳಿಸಿದೆ. ಇದರ ಬೆನ್ನಲ್ಲೇ, ವಿಮಾನಯಾನ ಕಂಪನಿಗಳು ಟಿಕೆಟ್‌ ದರವನ್ನು ಭಾರೀ ಪ್ರಮಾಣದಲ್ಲಿ ಏರಿಸಿರುವುದು ಟೀಕೆಗೆ ಗುರಿಯಾಗಿದೆ.
 ದೆಹಲಿ ಮತ್ತು ಲಂಡನ್‌ ನಡುವಣ ಪ್ರಯಾಣದ ಎಕಾನಮಿ ಕ್ಲಾಸ್‌ನ ಟಿಕೆಟ್‌ ದರವನ್ನು ಬ್ರಿಟಿಷ್‌ ಏರ್‌ವೇಸ್‌  3.95 ಲಕ್ಷ ರು.ಗೆ ನಿಗದಿಪಡಿಸಿದೆ. ಈ ಕುರಿತು ಸ್ವತಃ ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿ ಸಂಜೀವ್‌ ಗುಪ್ತಾ ಟ್ವೀಟ್‌ ಮಾಡಿದ್ದಾರೆ. ವಿದ್ಯಾರ್ಥಿಗಳು ಕಾಲೇಜು ನೇಮಕಾತಿಗಾಗಿ ವಿದೇಶಕ್ಕೆ ಪ್ರಯಾಣ ಮಾಡುತ್ತಿದ್ದಾರೆ. ಅವರಿಗೆ ಈ ದರ ದುಬಾರಿಯಾಗುತ್ತದೆ. ಈ ದುಬಾರಿ ದರವನ್ನು ನಾಗರಿಕ ವಿಮಾನಯಾನ ಸಚಿವಾಲದ ಗಮನಕ್ಕೆ ತರಲಾಗಿದೆ’ ಎಂದು ಅವರು ಹೇಳಿದ್ದಾರೆ.
ಅದರ ಬೆನ್ನಲ್ಲೇ ನಾಗರಿಕ ವಿಮಾನಯಾನ ಸಚಿವಾಲಯವು, ವಿವಿಧ ವಿಮಾನಯಾನ ಕಂಪನಿಗಳಿಂದ ಟಿಕೆಟ್‌ ದರದ ಬಗ್ಗೆ ಸ್ಪಷ್ಟನೆ ಕೇಳಿದೆ. ಬ್ರಿಟನ್‌ ಮಾತ್ರವಲ್ಲದೆ ಇತರೆ ಹಲವು ದೇಶಗಳ ವಿಮಾನಯಾನ ಸಂಸ್ಥೆಗಳು ಕೂಡಾ ಕಳೆದೊಂದು ತಿಂಗಳಿನಿಂದ ಟಿಕೆಟ್‌ ದರವನ್ನು ಭಾರೀ ಪ್ರಮಾಣದಲ್ಲಿಲ ಹೆಚ್ಚಿಸಿವೆ ಎಂದು ಈಸ್‌ಮೈ ಟ್ರಿಪ್‌ ಹೇಳಿದೆ. ಕಳೆದ ಆಗಸ್ಟ್‌ನಿಂದ ದೆಹಲಿಯಿಂದ ಅಮೆರಿಕಕ್ಕೆ ಹೋಗುವ ವಿಮಾನದರ 69 ಸಾವಿರದಿಂದ 87 ಸಾವಿರಕ್ಕೆ ಏರಿಕೆಯಾಗಿದೆ. ಮುಂಬೈನಿಂದ ಮಾಸ್ಕೋಗೆ 43000ದಿಂದ 85000ಕ್ಕೆ ಏರಿದೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು