News Karnataka Kannada
Saturday, April 27 2024
ದೇಶ

ಹಳಿ ತಪ್ಪಿ ನದಿಗೆ ಉರುಳಿದ ಗೂಡ್ಸ್‌ ರೈಲಿನ ಆರು ಬೋಗಿಗಳು

Goods Train 14092021
Photo Credit :

ಭುವನೇಶ್ವರ: ಅಂಗುಲ್‌–ತಲ್‌ಚೇರ್‌ ಮಾರ್ಗದಲ್ಲಿ ಸಂಚರಿಸುತ್ತಿದ್ದ ಈಸ್ಟ್‌ಕೋಸ್ಟ್‌ ರೈಲ್ವೆ ವಿಭಾಗದ ಗೂಡ್ಸ್‌ ರೈಲಿನ ಆರು ಬೋಗಿಗಳು ಮಂಗಳವಾರ ಮುಂಜಾನೆ ಹಳಿ ತಪ್ಪಿ ನದಿಗೆ ಉರುಳಿವೆ.

ಗೋಧಿಯನ್ನು ಸಾಗಿಸುತ್ತಿದ್ದ ರೈಲಿನ ಆರು ಬೋಗಿಗಳು ಮುಂಜಾನೆ 2.30ರ ಸುಮಾರಿಗೆ ಹಳಿ ತಪ್ಪಿ ನದಿಗೆ ಉರುಳಿವೆ. ಆದರೆ, ರೈಲಿನ ಎಂಜಿನ್‌ ಹಳಿಯ ಮೇಲೆ ಇದ್ದಿದ್ದರಿಂದ, ಲೋಕೊ ಪೈಲಟ್ ಮತ್ತು ಇತರ ಸಿಬ್ಬಂದಿಗೆ ಯಾವುದೇ ತೊಂದರೆಯಾಗಿಲ್ಲ.

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಭಾರೀ ಮಳೆಯಾಗುತ್ತಿದ್ದರಿಂದ ಈ ಅಪಘಾತ ಸಂಭವಿಸಿದೆ. ಫಿರೋಜ್‌ಪುರ ದಿಂದ ಖುರ್ದಾ ರಸ್ತೆಯತ್ತ ಹೋಗುತ್ತಿದ್ದ ಈ ಗೂಡ್ಸ್‌ ರೈಲಿನ ಬೋಗಿಗಳು ನಂದಿರಾ ಸೇತುವೆಯ ಮೇಲೆ ಹಳಿ ತಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದ ನಂತರ, ಈಸ್ಟ್‌ಕೋಸ್ಟ್ ರೈಲ್ವೆ ವಿಭಾಗ ಈ ಮಾರ್ಗದಲ್ಲಿ ಸಂಚರಿಸುವ 12 ರೈಲುಗಳನ್ನು ರದ್ದುಗೊಳಿಸಿತು. ಎಂಟು ರೈಲುಗಳಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚಿಸಿತು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು