News Karnataka Kannada
Saturday, May 04 2024
ಪಂಜಾಬ್

ಸಿಧು ರಾಜೀನಾಮೆ ಕಾಂಗ್ರೆಸ್ ಪಶ್ಚತ್ತಾಪ

Sidhu 19072021
Photo Credit :
ನವದೆಹಲಿ: ಅನುಭವ ಇಲ್ಲದ ಹಾಗೂ ಹೊರಗಿನಿಂದ ಬಂದ ಸಿಧುವನ್ನು ಪಕ್ಷದ ಉನ್ನತ ಸ್ಥಾನಕ್ಕೆ ನೇಮಿಸಿದ್ದು ತಪ್ಪು ಎಂದು ಪಕ್ಷದ ಹಿರಿಯ ಮುಖಂಡರು ಹೇಳಿದ್ದಾರೆ.

ಮೊದಲು ಸಿಧು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಬೇಕಿತ್ತು, ಪಕ್ಷದ ಸಿದ್ಧಾಂತ ಕಾರ್ಯವೈಖರಿಯನ್ನು ಅರ್ಥ ಮಾಡಿಕೊಳ್ಳಬೇಕಿತ್ತು ನಂತರ ಅವರಿಗೆ ಉನ್ನತ ಸ್ಥಾನ ನೀಡಿದರೆ ಅದರಲ್ಲಿ ಅರ್ಥವಿರುತ್ತಿತ್ತು. ಆದರೆ ಏಕಾಏಕಿ ಅವರನ್ನು ಉನ್ನತ ಸ್ಥಾನಕ್ಕೆ ತಂದು ಕೂರಿಸಿದ್ದು ತಪ್ಪು ಎಂಡು ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಸಿಧು ಬಿಜೆಪಿಯಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟು ಸೋತಿದ್ದರು. ಆತ ಆಪ್ ಪಕ್ಷದ ಜೊತೆಗೂ ಮಾತುಕತೆ ನಡೆಸಿದ್ದರು. ಅಂಥಾ ಸಮಯದಲ್ಲಿ ಅಮರಿಂದರ್ ಸಿಂಗ್ ಅವರನ್ನು ಬದಿಗೊತ್ತಿ ಸಿಧು ಅವರನ್ನು ಕಾಂಗ್ರೆಸ್ ಉನ್ನತ ಸ್ಥಾನಕ್ಕೆ ನೇಮಿಸಿದ್ದು ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನಿಸಿದಂತಾಗುತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.

ಲಾಲ್ ಬಹದೂರ್ ಶಾಸ್ತ್ರಿ ಮೊಮ್ಮಗ, ಪ್ರಿಯಾಂಕಾ ಗಾಂಧಿ ಅವರ ರಾಜಕೀಯ ಸಲಹೆಗಾರ ವಿಭಾಕರ್ ಶಾಸ್ತ್ರಿ ಕೂಡಾ ಈ ಮಾತಿಗೆ ಸಹಮತ ಸೂಚಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು