ನವದೆಹಲಿ : ಇಂಡಿಯಾ ಟುಡೇ ಸಮೂಹವು ಮುಂದಿನ ಪ್ರಧಾನಿ ಯಾರಾಗಬೇಕು ಎಂಬ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಲು ‘ಮೂಡ್ ಆಫ್ ದ ನೇಷನ್’ ಹೆಸರಲ್ಲಿ ದೇಶವ್ಯಾಪಿ ನಡೆಸಿದ ಸಮೀಕ್ಷೆಯಲ್ಲಿ ಶೇ.24ರಷ್ಟು ಜನರು ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲ ಸೂಚಿಸಿದ್ದಾರೆ.
ಇದರ ಮೂಲಕ ಪ್ರಧಾನಿ ಮೋದಿ ನಂ.1 ಆಗಿ ಹೊರಹೊಮ್ಮಿದ್ದಾರೆ. ಆಶ್ಚರ್ಯಕರ ಸಂಗತಿ ಎಂದರೆ ಎರಡನೇ ಸ್ಥಾನದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಇದ್ದಾರೆ. ಅವರಿಗೆ ಶೇ.11ರಷ್ಟು ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಶೇ.10, ದೆಹಲಿ ಸಿಎಂ ಕೇಜ್ರಿವಾಲ್, ಮಮತಾ ತಲಾ ಶೇ.8, ಅಮಿತ್ ಶಾ ಶೇ.7, ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾಗೆ ಶೇ.4ರಷ್ಟು ಬೆಂಬಲ ಸಿಕ್ಕಿದೆ