ವರ್ಷಾಂತ್ಯದೊಳಗೆ ರಷ್ಯಾದ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆ ಹೊಂದಿರುವ ಎಸ್-400 ಕ್ಷಿಪಣಿ ದೇಶದ ವಾಯುಪಡೆಗೆ ಸೇರ್ಪಡೆಯಾಗಲಿದೆ ಎಂದು ವಾಯುಪಡೆಯ ಮುಖ್ಯಸ್ಥ ವಿ.ಆರ್. ಚೌಧರಿ ಮಾಹಿತಿ ನೀಡಿದ್ದಾರೆ.
ಭಾರತ ರಷ್ಯಾದೊಂದಿಗೆ 2018 ರಲ್ಲಿ 5.43 ಬಿಲಿಯನ್ ಡಾಲರ್ ಗೆ 5 ಎಸ್ -400 ಕ್ಷಿಪಣಿ ವ್ಯವಸ್ಥೆಗಳನ್ನು ಪೂರೈಕೆ ಮಾಡಲು ಒಪ್ಪಂದ ಮಾಡಿಕೊಂಡಿದೆ.
ಈಗಾಗಲೇ ಎಸ್ 400 ಕ್ಷಿಪಣಿ ವಿತರಣೆ ಹಂತದಲ್ಲಿದೆ. ಮೊದಲ ರೆಜಿಮೆಂಟ್ ಈ ವರ್ಷದೊಳಗೆ ವಾಯು ಸೇನೆಗೆ ಸೇರಿಕೊಳ್ಳುವ ಸಾಧ್ಯತೆ ಇದೆ.
ಈ ಕ್ಷಿಪಣಿಯು ದೇಶದ ಗಡಿಯೊಳಗೆ ಬರುವ ಪ್ರತಿಕೂಲ ವಿಮಾನಗಳು, ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು 400 ಕಿಮೀ ದೂರದಲ್ಲಿ ಮತ್ತು 30 ಕಿಮೀ ಎತ್ತರದಲ್ಲೇ ನಾಶಪಡಿಸುವ ಸಾಮರ್ಥ್ಯ ಹೊಂದಿದೆ.