ಮುಂಬೈ : ಕೋವಿಶೀಲ್ಡ್ ಲಸಿಕೆಯ ಕೊರತೆಯಿಂದಾಗಿ
ಎರಡು ಡೋಸ್ಗಳ ನಡುವಿನ ಅಂತರವನ್ನು ವಿಸ್ತರಿಸಲಾಗಿದೆ ಎಂದು ಕೋವಿಶೀಲ್ಡ್ ತಯಾರಿ ಸಂಸ್ಥೆ ಸೀರಂನ ಅಧ್ಯಕ್ಷ ಸೈರಸ್ ಪೂನಾವಾಲಾ ಹೇಳಿದ್ದಾರೆ.
ನಗರದ ಸಭೆಯೊಂದರಲ್ಲಿ ಮಾತನಾಡಿದ ಪೂನಾವಾಲಾ, ಎರಡೂ ಡೋಸ್ಗಳ ಮಧ್ಯೆ 3-4 ತಿಂಗಳ ಅಂತರವಿರಬೇಕು ಎಂಬುದು ಸರಿಯಲ್ಲ. ಆದರೆ ಕೋವಿಡ್ನಿಂದ ಗುಣಮುಖರಾದ ವ್ಯಕ್ತಿಯು 3-4 ತಿಂಗಳ ಅಂತರದಲ್ಲಿ ಲಸಿಕೆ ಪಡೆಯಬಹುದು. ಸಾಮಾನ್ಯ ಪ್ರಕರಣಗಳಲ್ಲಿ ಇದು ಮರುಕಳಿಸಬಾರದು. ಆದಾಗ್ಯೂ, ದೇಶದಲ್ಲಿ ಲಸಿಕೆಗಳ ಕೊರತೆ ಕಾರಣದಿಂದಾಗಿ ಭಾರತ ಸರ್ಕಾರ ಕೋವಿಶೀಲ್ಡ್ ಲಸಿಕೆಯ ಅಂತರವನ್ನು 12-16 ವಾರಗಳಿಗೆ ವಿಸ್ತರಿಸಲಾಗಿತ್ತು ಎಂದರು.
ಅಲ್ಲದೆ ಎರಡೂ ಡೋಸ್ಗಳನ್ನು ಪಡೆದ ವ್ಯಕ್ತಿಯಲ್ಲಿ 6 ತಿಂಗಳ ಬಳಿಕ ಕೋವಿಡ್ ವಿರುದ್ಧ ಹೋರಾಡುವ ಪ್ರತಿಕಾಯಗಳ ಸಾಮರ್ಥ್ಯ ಕುಸಿಯುತ್ತದೆ. ಹೀಗಾಗಿ ಎರಡೂ ಡೋಸ್ ಪಡೆದ 6 ತಿಂಗಳ ಬಳಿಕ 3ನೇ ಡೋಸ್(ಬೂಸ್ಟರ್) ಅನ್ನು ಪಡೆಯಬಹುದು ಎಂದರು.
ಈ ಹಿಂದೆ ವೈಜ್ಞಾನಿಕ ಕಾರಣ ಹಿನ್ನೆಲೆಯಲ್ಲಿ 4-8 ವಾರಗಳ ಅಂತರದಲ್ಲಿ ಪಡೆಯಬಹುದಾಗಿದ್ದ ಕೋವಿಶೀಲ್ಡ್ ಲಸಿಕೆಯ 2 ಡೋಸ್ಗಳ ಅಂತರವನ್ನು 12-16 ವಾರಗಳಿಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.
|
|
ಲಸಿಕೆಗಳ ನಡುವಿನ ಅಂತರ ವಿಸ್ತರಣೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.