News Karnataka Kannada
Monday, April 29 2024
ಸಾಂಡಲ್ ವುಡ್

ಮಾನ್ಸೂನ್ ರಾಗ ಚಿತ್ರದ ಟೀಸರ್ ಬಿಡುಗಡೆ ಮಾಡಿದ ಚಿತ್ರತಂಡ

New Project 2021 08 15t085303.761
Photo Credit :

ಬೆಂಗಳೂರು : ಡಾಲಿ ಧನಂಜಯ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಮೊದಲ ಬಾರಿಗೆ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿರುವ ಮಾನ್ಸೂನ್ ರಾಗ ಚಿತ್ರದ ಟೀಸರ್  ಇದೀಗ ಚಿತ್ರ ತಂಡ ರಿಲೀಸ್ ಮಾಡಿದೆ.

ರಮೇಶ್‌ ಅರವಿಂದ್‌ ನಟನೆಯ ‘ಪುಷ್ಪಕ ವಿಮಾನ’  ಖ್ಯಾತಿಯ  ನಿರ್ದೇಶಕ ಎಸ್‌. ರವೀಂದ್ರನಾಥ್‌ ಮತ್ತು ನಿರ್ಮಾಪಕ ವಿಖ್ಯಾತ್‌ ಎರಡನೇ ಬಾರಿ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ.

ಈ ಚಿತ್ರ ಪಿರಿಯಾಡಿಕಲ್‌ ಸಿನಿಮಾ ಆಗಿದ್ದು, ಈಗಾಗಲೇ ಬಹುಪಾಲು ಚಿತ್ರೀಕರಣವನ್ನೂ ಮಾಡಿ ಮುಗಿಸಿದೆ ಚಿತ್ರತಂಡ. ಇದು ವಿಂಟೇಜ್‌ ಸಿನಿಮಾ. 60-70ರ ದಶಕದ ಕಥೆಯಾಗಿದೆ. ಚಿತ್ರದಲ್ಲಿ ಲವ್‌ ಸ್ಟೋರಿ ಇದೆ. ಅದರ ಜತೆ ಬೇರೆ ಬೇರೆ ಅಂಶಗಳೂ ಇರಲಿವೆ.

ಧನಂಜಯ್‌ ಮತ್ತು ರಚಿತಾ ನಟನೆಯ ದೃಶ್ಯಗಳ ಚಿತ್ರೀಕರಣ ಮಾಡಿ ಮುಗಿಸಲಾಗಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಅನೂಪ್‌ ಸೀಳಿನ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟರು ಕೂಡ ಮತ್ತೊಂದು ಲೀಡ್‌ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರು ಯಾರು ಎನ್ನುವುದನ್ನು ಸದ್ಯದಲ್ಲೇ ಪ್ರಕಟಿಸುವುದಾಗಿ ಚಿತ್ರತಂಡ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು