ರೈಲ್ವೆ ನಿಲ್ದಾಣದಲ್ಲಿ ಆವರಣದಲ್ಲಿ ಮಾಸ್ಕ್ ಹಾಕದೇ ನಿಂತರೆ ಇನ್ಮುಂದೆ 500ರೂ. ಫೈನ್ ನೀಡಬೇಕಾಗುತ್ತದೆ. ರೈಲ್ವೆ ಕಾಯಿದೆ ಅನ್ವಯ ನಿಲ್ದಾಣದ ಅಂಗಳದಲ್ಲಿ ಮಾಸ್ಕ್ ಧರಿಸದಿದ್ದರೆ ದಂಡ ಬೀಳಲಿದೆ. ಈ ನಿಯಮ ಇನ್ನೂ ಆರು ತಿಂಗಳು ಜಾರಿಯಲ್ಲಿರಲಿದೆ.
ಕೋವಿಡ್ ಸಂಬಂಧಿ ಮಾರ್ಗಸೂಚಿಗಳನ್ನು ರೈಲ್ವೆ ಸಚಿವಾಲಯ ಇನ್ನೂ ಆರು ತಿಂಗಳು ವಿಸ್ತರಿಸಿದೆ. ನಾನಾ ರಾಜ್ಯಗಳಿಗೆ ತೆರಳುವ ಪ್ರಯಾಣಿಕರು, ಆಯಾ ರಾಜ್ಯಗಳಲ್ಲಿರುವ ಕೋವಿಡ್ ಮಾರ್ಗಸೂಚಿ ಅರಿಯಬೇಕು ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.
ಕೋವಿಡ್ ಪ್ರಕರಣಗಳು ಸಂಪೂರ್ಣವಾಗಿ ಇಳಿಕೆ ಕಾಣದ ಹಿನ್ನೆಲೆ ರೈಲುಗಳಲ್ಲಿ, ರೈಲ್ವೆ ನಿಲ್ದಾಣದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.