News Karnataka Kannada
Tuesday, April 30 2024
ದೇಶ

ರಾಹುಲ್‌ ಖಾತೆಯಿಂದ ವಿವಾದಿತ ಪೋಸ್ಟ್‌ ಡಿಲೀಟ್‌ ಮಾಡಿದ ಫೇಸ್‌ಬುಕ್‌

Rahul Gandhi Dt 19 6 21 No1962118 Newsk 1247494964
Photo Credit :

ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರ ಜತೆಗಿನ ಫೋಟೊ ಪೋಸ್ಟ್ ಮಾಡಿದ್ದನ್ನು ಫೇಸ್‌ಬುಕ್ ಅಳಿಸಿ ಹಾಕಿದೆ.

ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಿಂದ ಸಂದೇಶವನ್ನು ಅಳಿಸಿಹಾಕುವ ಬಗ್ಗೆ ರಾಹುಲ್ ಗಾಂಧಿ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ (ಎನ್‌ಸಿಪಿಸಿಆರ್) ಫೇಸ್‌ಬುಕ್ ಮಾಹಿತಿ ನೀಡಿತ್ತು.

ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಿಂದ ಸಂದೇಶವನ್ನು ಅಳಿಸಿಹಾಕುವಂತೆ ರಾಹುಲ್ ಗಾಂಧಿ ಅವರಿಗೆ ಕೆಲವು ದಿನಗಳ ಹಿಂದೆ ಫೇಸ್‌ಬುಕ್‌ ಸೂಚಿಸಿತ್ತು.  ‘ನೀತಿಗಳ ಉಲ್ಲಂಘನೆಯಾದ ಕಾರಣ ನಾವು ಸಂದೇಶವನ್ನು ಅಳಿಸಿಹಾಕುವ ತೀರ್ಮಾನ ಕೈಗೊಳ್ಳಬೇಕಾಯಿತು’ ಎಂದು ಫೇಸ್‌ಬುಕ್‌ ವಕ್ತಾರರು ತಿಳಿಸಿದ್ದಾರೆ.

ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರ ಜತೆಗಿನ ಫೋಟೊ ಪೋಸ್ಟ್ ಮಾಡಿದ್ದಕ್ಕೆ ಈ ತಿಂಗಳ ಆರಂಭದಲ್ಲಿ ಟ್ವೀಟರ್ ಕೂಡ ರಾಹುಲ್ ಗಾಂಧಿ ಅವರ ಖಾತೆಯನ್ನು ಲಾಕ್ ಮಾಡಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು