ನವದೆಹಲಿ: ನವದೆಹಲಿಯಲ್ಲಿ ಶನಿವಾರ ಬೆಳಿಗ್ಗೆ ಭಾರಿ ಮಳೆಯಾಗುತ್ತಿದೆ. ನಗರದ ಹಲವು ಭಾಗಗಳು ಜಲಾವೃತವಾಗಿದೆ.
ದೆಹಲಿಯ ಹಲವು ಭಾಗ ಜಲಾವೃತವಾಗಿರುವ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ನಿರ್ಣಾಯಕ ಅಂಡರ್ಪಾಸ್ಗಳಲ್ಲಿ ಸಂಚಾರ ನಿರ್ಬಂಧಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ನಾಗರಿಕರಿಗೆ ಮಾಹಿತಿ ನೀಡಿದ್ದಾರೆ.
ಜಲಾವೃತವಾಗಿರುವ ಪ್ರದೇಶಗಳ ಸಮಸ್ಯೆ, ದೂರುಗಳನ್ನು ಆದ್ಯತೆಯ ಮೇಲೆ ಪರಿಹರಿಸಲು ಅಧಿಕಾರಿಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದೆ.
ಭಾರಿ ಮಳೆಯಿಂದಾಗಿ ಪುಲ್ ಪ್ರಹ್ಲಾದಪುರ ಅಂಡರ್ಪಾಸ್, ಲಜಪತ್ ನಗರ, ಜಂಗಪುರ, ಐಟಿಒ, ಪ್ರಗತಿ ಮೈದಾನದ ಸುತ್ತಲಿನ ರಸ್ತೆಗಳು, ಸಂಗಮ್ ವಿಹಾರ್, ರೋಹ್ಟಕ್ ರಸ್ತೆ, ಮಂಗೋಲ್ಪುರಿ, ಕಿರರಿ ಮತ್ತು ಮಾಳವೀಯ ನಗರಗಳಲ್ಲಿ ನೀರು ನಿಂತಿದೆ.