News Karnataka Kannada
Sunday, May 05 2024
ದೇಶ

ಫೆ. 1ರಿಂದ ಬಾಗಿಲು ತೆರೆಯಲಿದೆ ಪುರಿ ಜಗನ್ನಾಥ ದೇವಾಲಯ

Puri Jagannath Temple
Photo Credit :

ಕೋವಿಡ್‌ ಕಾರಣದಿಂದ ಜ.31ರವರೆಗೆ ಬಂದ್‌ ಆಗಿರುವ ಪುರಿ ಜಗನ್ನಾಥ ದೇವಾಲಯ ಫೆ.1ರಿಂದ ತೆರೆಯಲಿದೆ. ಈ ಬಗ್ಗೆ ಪುರಿಯ ಜಿಲ್ಲಾಧಿಕಾರಿ ಸಮರ್ಥ್‌ ವರ್ಮಾ ಮಾಹಿತಿ ನೀಡಿದ್ದು, ಕೋವಿಡ್‌ ಮೂರನೇ ಅಲೆ ಭೀತಿಯಿಂದ ದೇಶದ ಬಹುತೇಕ ದೇವಾಲಯಗಳು ಬಂದ್‌ ಆಗಿದ್ದವು.

ಅದರಲ್ಲಿ ಪುರಿ ಜಗನ್ನಾಥ ದೇವಾಲಯವೂ ಒಂದು. ಆದರೆ ಈಗ ಕೋವಿಡ್‌ ನಿಯಮ ಸಡಿಲಿಕೆಯಿಂದ ಭಕ್ತರಿಗೆ ಫೆ.1ರಿಂದ ಜಗನ್ನಾಥನ ದರ್ಶನ ಸಿಗಲಿದೆ ಎಂದರು.

ಮುಂದಿನ ದಿನಗಳಲ್ಲಿಯೂ ದೇವಸ್ತಾನದಲ್ಲಿ ಕೋವಿಡ್‌ ನಿಯಮಗಳನ್ನು ಪಾಲಿಸಲಿದ್ದು, ಪ್ರತಿ ಭಾನುವಾರ ಸ್ಯಾನಿಟೈಸೇಷನ್‌ ಗಾಗಿ ದೇವಸ್ಥಾನ ಬಂದ್‌ ಮಾಡಲಾಗುವುದು.

ಇನ್ನು ದೇವಸ್ಥಾನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಎರಡು ಡೋಸ್ ಕೋವಿಡ್‌ ಲಸಿಕೆ ಹಾಗೂ 72 ಗಂಟೆಯೊಳಗಿನ ಆರ್ಟಿಪಿಸಿಆರ್‌ ವರದಿ ತರಬೇಕು ಎಂದರು.

ರಾಜ್ಯದಲ್ಲಿ ಹಾಗೂ ದೇವಸ್ಥಾನದ ಸಿಬ್ಬಂದಿಯಲ್ಲಿ ಕೋವಿಡ್‌ ಪತ್ತೆಯಾದ ಕಾರಣ ಜ.10ರಿಂದ ಜ.31ರವರೆಗೆ ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ರದ್ದುಗೊಳಿಸಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು