ಬೆಂಗಳೂರು: ದಿವಂಗತ ನಟ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲಾ ಅಗಲಿ ಇಂದಿಗೆ ಮೂರು ತಿಂಗಳು ಕಳೆದಿದ್ದು, ಇಂದು ರಾಜ್ ಕುಟುಂಬ ಪುಣ್ಯ ತಿಥಿ ಕಾರ್ಯ ನೆರವೇರಿಸಲಿದ್ದಾರೆ.
ಅಪ್ಪು ಸಮಾಧಿ ಬಳಿ ಕುಟುಂಬಸ್ಥರು ಇಂದು ಮೂರನೇ ತಿಂಗಳ ಪುಣ್ಯ ತಿಥಿ ಕಾ ರ್ಯ ನೆರವೇರಿಸಲಿದ್ದು, ಅಲ್ಲದೇ ಹಲವು ಸಮಾಜಮುಖಿ ಕಾರ್ಯಗಳನ್ನೂ ನಡೆಸಲಿದ್ದಾರೆ.
ಇದರಂತೆ, 500 ಸಸಿಗಳನ್ನು ಅಭಿ ಮಾ ನಿಗಳಿಗೆ ನೀಡಲಾಗುತ್ತದೆ. ಹಾಗೆಯೇ ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಅಪ್ಪು ಸಮಾದಿ ಎದುರು ಸ್ಕಿಲ್ ಡಿಪಾರ್ಟ್ಮೆಂಟ್ ವತಿಯಿಂದ ಸಂಜೆ 6 ಘಂಟೆಗೆ ದೀಪೋತ್ಸವ ನಡೆಯಲಿದ್ದು, ಈ ಕಾರ್ಯದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ, ಸಹೋದರ ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ಕುಟುಂಬಸ್ಥರು ಭಾಗಿಯಾಗಲಿದ್ದಾರೆ