News Karnataka Kannada
Saturday, May 04 2024
ದೇಶ

ಪ್ರಿಪೇಯ್ಡ್ ಬಳಕೆದಾರರಿಗೆ ನಾಲ್ಕು ಸ್ಮಾರ್ಟ್ ಯೋಜನೆಗಳನ್ನು ಪರಿಚಯಿಸಿದ ವಿಐ

Vi
Photo Credit :

ಟೆಲಿಕಾಂ ಕ್ಷೇತ್ರದಲ್ಲಿ ಬೆಲೆ ಸಮರ ಸಾಮಾನ್ಯ. ಬೇರೆ ಕಂಪನಿಗಳಿಗೆ ಟಕ್ಕರ್ ನೀಡಲು ಈಗ ವೊಡಾಫೋನ್-ಐಡಿಯಾ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ನಾಲ್ಕು ಸ್ಮಾರ್ಟ್ ಯೋಜನೆಗಳನ್ನು ಪರಿಚಯಿಸಿದೆ. ಹೊಸ ವಿಐ ಪ್ಲಾನ್‌ಗಳ ಬೆಲೆ 155, 239, 666 ಮತ್ತು 699 ರೂಪಾಯಿಯಾಗಿದೆ. ಕೆಲ ದಿನಗಳ ಹಿಂದಷ್ಟೆ ಯೋಜನೆಗಳ ಬೆಲೆ ಏರಿಕೆ ಮಾಡಿದ್ದ ವಿಐ ಈಗ ಹೊಸ ಪ್ಲಾನ್ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದೆ.

ವಿಐನ 155 ರೂಪಾಯಿ ಯೋಜನೆ 24 ದಿನಗಳ ಸಿಂಧುತ್ವ ಹೊಂದಿದೆ. ಇದರಲ್ಲಿ ಬಳಕೆದಾರರಿಗೆ 1ಜಿಬಿ ಡೇಟಾ, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮತ್ತು 300 ಎಸ್‌ಎಂಎಸ್ ಲಭ್ಯವಿದೆ.

24 ದಿನಗಳ ವ್ಯಾಲಿಡಿಟಿಯು ವಿಐನ 239 ರೂಪಾಯಿ ಯೋಜನೆಯಲ್ಲಿ ಪ್ರತಿ ದಿನ 1ಜಿಬಿ ಡೇಟಾ ಲಭ್ಯವಿದೆ. ಅನಿಯಮಿತ ಕರೆ ಹಾಗೂ 100 ಎಸ್‌ಎಂಎಸ್ ಸಿಗಲಿದೆ. ಇನ್ನು 666 ರೂಪಾಯಿ ಯೋಜನೆಯಲ್ಲಿ 77 ದಿನಗಳ ಮಾನ್ಯತೆಯೊಂದಿಗೆ ದಿನಕ್ಕೆ 1.5ಜಿಬಿ ಡೇಟಾ ನೀಡಲಾಗುವುದು. ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ಲಭ್ಯವಿದೆ. ಡೇಟಾ ಡಿಲೈಟ್ ಆಫರ್ ಮತ್ತು ವೀಕೆಂಡ್ ಡೇಟಾ ರೋಲ್‌ಓವರ್ ಇದ್ರಲ್ಲಿ ಲಭ್ಯವಿದೆ.

ಇನ್ನು ವಿಐನ 699 ರೂಪಾಯಿ ಯೋಜನೆಯು 56 ದಿನಗಳ ಸಿಂಧುತ್ವ ಹೊಂದಿದೆ. ಇದರಲ್ಲಿ ಪ್ರತಿದಿನ 3ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ಸಿಗಲಿದೆ. ಬಿಂಜ್ ಆಲ್ ನೈಟ್, ಡೇಟಾ ಡಿಲೈಟ್ ಆಫರ್ ಮತ್ತು ವೀಕೆಂಡ್ ಡೇಟಾ ರೋಲ್‌ಓವರ್ ಸೌಲಭ್ಯ ಸಿಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು