ದೇಶದಲ್ಲಿ ಜನವರಿ 3 ರಿಂದ 15-18 ವಯೋಮಾನದ 3.5 ಕೋಟಿಗೂ ಹೆಚ್ಚು ಮಕ್ಕಳಿಗೆ ಕೊರೋನಾ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ.
Amazing enthusiasm among Young India for #COVID19 vaccination 💉
Over 3.5 crore children between the 15-18 Age group have received 1st dose of COVID-19 vaccine, since 3rd January.
Congratulations to all my young friends who have got vaccinated.#SabkoVaccineMuftVaccine pic.twitter.com/4sa8DzCIJ4
— Dr Mansukh Mandaviya (मोदी का परिवार) (@mansukhmandviya) January 17, 2022
ಈ ಕುರಿತು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡ ಅವರು, ಕೊರೋನಾ ಲಸಿಕೆ ಪಡೆಯುವಲ್ಲಿ ಯುವಕರು ಅತ್ಯುತ್ಸಾಹ ತೋರಿದ್ದಾರೆ. ಜನವರಿ 3 ರಿಂದ 15- 18 ವರ್ಷದ ಮಕ್ಕಳಿಗೆ ಲಸಿಕೆ ಹಾಕಲು ಆರಂಭಿಸಲಾಗಿದೆ.
ಇಲ್ಲಿಯವರೆಗೆ 3.5 ಕೋಟಿ ತರುಣರು ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ನನ್ನೆಲ್ಲಾ ಯುವ ಸ್ನೇಹಿತರಿಗೆ ಅಭಿನಂದನೆಗಳು ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.