ದೇಶದಲ್ಲಿ ಓಮಿಕ್ರಾನ್ ವೈರಸ್ ನಿಧಾನವಾಗಿ ಹೆಚ್ಚುತ್ತಿದ್ದು, ನೂರಾರ ಗಡಿ ದಾಟಿದೆ. ಈಗ 101ಕ್ಕೆ ಏರಿಕೆಯಾಗಿದೆ. ಈ ಕುರಿತು ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು, 11 ರಾಜ್ಯಗಳಲ್ಲಿ 101 ಜನರಿಗೆ ಓಮಿಕ್ರಾನ್ ವೈರಸ್ ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ 32, ದೆಹಲಿಯಲ್ಲಿ 22, ರಾಜಸ್ಥಾನ 17, ಕರ್ನಾಟಕ 08 , ತೆಲಂಗಾಣ 05, ಗುಜರಾತ್ 05, ಕೇರಳ 05, ಆಂಧ್ರಪ್ರದೇಶ 01, ಚಂಢೀಗಡ 01, ತಮಿಳುನಾಡು 01, ಪಶ್ಚಿಮ ಬಂಗಾಳ 01 ಕೇಸ್ ದೃಢಪಟ್ಟಿದೆ.