ದೆಹಲಿ : ವರಮಹಾಲಕ್ಷ್ಮಿ ಹಬ್ಬದ ದಿನ ಹೆಣ್ಣುಮಕ್ಕಳಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಬರಿ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಪ್ರತಿ 10 ಗ್ರಾಂಗೆ 370ರೂ ಇಳಿಕೆಯಾಗಿದೆ.
ಗುಡ್ ರಿಟರ್ನ್ಸ್ ವೆಬ್ಸೈಟ್ನ ವಿವರಗಳ ಪ್ರಕಾರ, ಬೆಲೆಯಲ್ಲಿ ಸ್ಥಿರವಾದ ಏರಿಕೆಯ ನಂತರ ಚಿನ್ನದ ದರದಲ್ಲಿ ಭಾರೀ ಕುಸಿತವಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಚಿನ್ನದ ಬೆಲೆಗಳು ಸಮತೋಲನದಲ್ಲಿ ಉಳಿದಿವೆ. ಸ್ಪಾಟ್ ಚಿನ್ನವು ಪ್ರತಿ ಔನ್ಸ್ಗೆ 1,780.43 ಡಾಲರ್ಗಳಷ್ಟು ಇಳಿಕೆಯಾಗಿದೆ.