News Karnataka Kannada
Friday, May 03 2024
ವಿದೇಶ

ಎರಡು ದಶಕದ ಬಳಿಕ ಬಗ್ರಾಮ್‌ ಏರ್‌ ಫೀಲ್ಡ್‌ ತೆರವುಗೊಳಿಸಿದ ಅಮೆರಿಕನ್‌ ಪಡೆಗಳು

Us Troops 2 7 21
Photo Credit :

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರ ಸಂಘಟನೆ ವಿರುದ್ಧದ ತನ್ನ ಹೋರಾಟದ ಕೇಂದ್ರವನ್ನಾಗಿಸಿಕೊಂಡಿದ್ದ ಮತ್ತು ಪೆಂಟಗನ್ ಮೇಲಿನ 9/11ರ ದಾಳಿಯ ಸಂಚುಕೋರ ಅಲ್ ಖೈದಾವನ್ನು ಸದೆಬಡಿಯಲು ಮುಖ್ಯ ನೆಲೆಯನ್ನಾಗಿಸಿಕೊಂಡಿದ್ದ ಬಗ್ರಾಮ್ ಏರ್‌ಫೀಲ್ಡ್‌ ಅನ್ನು ಸುಮಾರು 20 ವರ್ಷಗಳ ಬಳಿಕ ಅಮೆರಿಕ ತೆರವುಗೊಳಿಸಿದೆ. ವಾಯುನೆಲೆಯನ್ನು ಆಫ್ಘನ್ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಪಡೆಗೆ ಸಂಪೂರ್ಣವಾಗಿ ಹಸ್ತಾಂತರಿಸಲಾಗಿದೆ ಎಂದು ತಮ್ಮ ಅಧಿಕೃತ ಗುರುತು ಬಿಟ್ಟುಕೊಡದ  ಅಮೆರಿಕದ ಇಬ್ಬರು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಈ ನಡೆಯ ಮೂಲಕ ಅಫ್ಘಾನಿಸ್ತಾನ ನೆಲದಲ್ಲಿರುವ ತನ್ನ ಪಡೆಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಕರೆಸಿಕೊಳ್ಳುತ್ತಿರುವ ಸೂಚನೆಯನ್ನು ಅಮೆರಿಕ ನೀಡಿದೆ. ತಾಲಿಬಾನ್ ಹಾಗೂ ಅಲ್‌ಖೈದಾ ವಿರುದ್ಧದ ಸುದೀರ್ಘ ಯುದ್ಧ ಕಾರ್ಯಾಚರಣೆಗಳಿಗೆ ಬಗ್ರಾಮ್ ವಾಯುನೆಲೆಯನ್ನು ಅಮೆರಿಕ ಮೂಲ ಕೇಂದ್ರವನ್ನಾಗಿ ಬಳಸಿಕೊಂಡಿತ್ತು. ಆದರೆ, ಅಫ್ಘಾನಿಸ್ತಾನದಲ್ಲಿನ ಅಮೆರಿಕದ ಉನ್ನತ ಕಮಾಂಡರ್ ಜನರಲ್ ಆಸ್ಟಿನ್ ಎಸ್ ಮಿಲ್ಲರ್ ಅವರು ಪಡೆಗಳನ್ನು ಕಾಪಾಡುವ ಸಲುವಾಗಿ ವಾಯುನೆಲೆಯನ್ನು ಬಳಸಿಕೊಳ್ಳುಗವ ಎಲ್ಲ ಸಾಮರ್ಥ್ಯ ಹಾಗೂ ಅಧಿಕಾರಗಳನ್ನು ಉಳಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ 11ರ ವೇಳೆಗೆ ಅಫ್ಘಾನಿಸ್ತಾನದಿಂದ ಎಲ್ಲ ಪಡೆಗಳನ್ನೂ ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಜೋ ಬೈಡನ್ ಭರವಸೆ ನೀಡಿದ್ದರು. ಅದಕ್ಕೆ ಕೆಲವು ತಿಂಗಳ ಮುನ್ನವೇ ಅಲ್ಲಿರುವ ಅಮೆರಿಕದ ಸುಮಾರು 2,500-3,500 ಪಡೆಗಳು ಆಫ್ಘನ್ ನೆಲವನ್ನು ತೊರೆಯಲು ಮುಂದಾಗಿವೆ.
ಅಫ್ಘಾನಿಸ್ತಾನದಿಂದ ತನ್ನ ಕೊನೆಯ ಯೋಧನ ನಿರ್ಗಮನ ಯಾವಾಗ ಎನ್ನುವುದನ್ನು ಬಹಿರಂಗಪಡಿಸಲು ಭದ್ರತೆಯ ಕಾರಣಗಳಿಂದ ಅಮೆರಿಕ ನಿರಾಕರಿಸಿದೆ. ಆದರೆ, ಕಾಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತೆಯ ವಿಚಾರ ಇನ್ನೂ ಬಗೆಹರಿದಿಲ್ಲ. ಅಮೆರಿಕ ಹಾಗೂ ಕುರ್ದಿಶ್ ಪಡೆಗಳು ವಿಮಾನ ನಿಲ್ದಾಣಕ್ಕೆ ಭದ್ರತೆ ಒದಗಿಸುತ್ತಿವೆ. ಅಮೆರಿಕದ ಪಡೆಗಳು ಅಫ್ಘಾನಿಸ್ತಾನವನ್ನು ಅಧಿಕೃತವಾಗಿ ತೊರೆದರೂ, ರಾಜಧಾನಿಯಲ್ಲಿನ ತನ್ನ ರಾಯಭಾರ ಕಚೇರಿ ಹಾಗೂ ವಿವಿಧೆಡೆ ರಕ್ಷಣೆಗಾಗಿ ಸುಮಾರು 6,500 ಪಡೆಗಳು ಅಲ್ಲಿಯೇ ಮುಂದುವರಿಯಲಿವೆ. ತಾಲಿಬಾನ್ ಉಗ್ರರ ಉಪಟಳ ತೀವ್ರವಾಗಿದ್ದಾಗ ಒಂದು ಲಕ್ಷಕ್ಕೂ ಅಧಿಕ ಪಡೆಗಳು ಬಗ್ರಾಮ್ ವಾಯುನೆಲೆಯಲ್ಲಿ ಬೀಡುಬಿಟ್ಟಿದ್ದವು. ಅಮೆರಿಕದ ನ್ಯಾಟೋ ಮಿತ್ರ ದೇಶಗಳ ಪಡೆಗಳು ಕೂಡ ಅಫ್ಘಾನಿಸ್ತಾನದಿಂದ ನಿರ್ಗಮಿಸುವ ಸಾಧ್ಯತೆ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು