News Karnataka Kannada
Tuesday, April 30 2024
ವಿದೇಶ

‘ಸ್ಪುಟ್ನಿಕ್‌ ವಿ’ ಲಸಿಕೆ ತಯಾರಿಕೆಗೆ ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯ ಅನುಮತಿ

Sputnik Delhi 5 7 21
Photo Credit :

ನವದೆಹಲಿ: ದೇಶದಲ್ಲಿ ‘ಸ್ಪುಟ್ನಿಕ್‌ ವಿ’ ಲಸಿಕೆ ತಯಾರಿಸಲು ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯ (ಡಿಸಿಜಿಐ) ಅನುಮತಿ ನೀಡಿದೆ. ಪನೇಸಿಯಾ ಬಯೊಟೆಕ್‌ ಸೋಮವಾರ ಈ ವಿಷಯ ಪ್ರಕಟಿಸಿದೆ.
‘ಭಾರತದಲ್ಲಿ ಸ್ಪುಟ್ನಿಕ್‌ ವಿ ಲಸಿಕೆ ತಯಾರಿಸಲು ಅನುಮತಿ ದೊರೆತಿದೆ. ಲಸಿಕೆ ತಯಾರಿಕೆಗೆ ತ್ವರಿತವಾಗಿ ಎಲ್ಲ ಪ್ರಕ್ರಿಯೆಗಳಿಗೆ ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರಕ್ಕೆ ಕೃತಜ್ಞತೆಗಳು’ ಎಂದು ಪನೇಸಿಯಾ ಬಯೊಟೆಕ್‌ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ ಜೈನ್‌ ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದ ಬದ್ದಿಯಲ್ಲಿ ಪನೇಸಿಯಾ ಬಯೊಟೆಕ್‌ ಕೇಂದ್ರದಲ್ಲಿ ತಯಾರಿಸಿದ ಲಸಿಕೆಯನ್ನು ಗುಣಮಟ್ಟದ ಪರೀಕ್ಷೆಗಾಗಿ ರಷ್ಯಾದ ಗಮಲೆಯಾ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಗುಣಮಟ್ಟಕ್ಕೆ ಸಂಬಂಧಿಸಿದ ಎಲ್ಲ ಮಾನದಂಡಗಳನ್ನು ಪೂರೈಸಲಾಗಿದೆ ಎಂದು ತಿಳಿಸಿದ್ದಾರೆ. ಸ್ವುಟ್ನಿಕ್‌ ವಿ ಅನ್ನು ಭಾರತದಲ್ಲಿ ತುರ್ತು ಬಳಕೆಯ ಮಾನ್ಯತೆಗಾಗಿ 2021ರ ಏಪ್ರಿಲ್‌ 12ರಂದು ನೋಂದಣಿ ಮಾಡಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು