News Karnataka Kannada
Saturday, May 11 2024
ದೇಶ

ಉತ್ತರ ಪ್ರದೇಶ ; ಒನ್‌ ಚೈಲ್ಡ್‌ ನೀತಿ ತೆಗೆಯುವಂತೆ ವಿಹೆಚ್‌ಪಿ ಒತ್ತಾಯ

Vhp Delhi 13 7 21
Photo Credit :

ನವದೆಹಲಿ : ತನ್ನ ಕರಡು ಜನಸಂಖ್ಯಾ ನಿಯಂತ್ರಣ ಮಸೂದೆಯಿಂದ ‘ಒನ್-ಚೈಲ್ಡ್‌‌’ ನೀತಿಯನ್ನು ತೆಗೆದುಹಾಕುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಸೂಚಿಸಿದೆ. ಇದು ವಿವಿಧ ಸಮುದಾಯಗಳ ನಡುವಿನ ಜನಸಂಖ್ಯೆಯ ಅಸಮತೋಲನ ಮತ್ತು ಕುಗ್ಗುವಿಕೆಯ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಅದು ಹೇಳಿದೆ .ಉತ್ತರ ಪ್ರದೇಶದ ಜನಸಂಖ್ಯೆ (ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆ-2021 ಯಲ್ಲಿನ ಪೋಷಕರ ಬದಲು ಮಗುವಿಗೆ ನೀಡಲಾಗುವ ಬಹುಮಾನ ಅಥವಾ ಶಿಕ್ಷೆಯ ಅಸಂಗತತೆಯನ್ನು ತೆಗೆದುಹಾಕುವಂತೆ ವಿಹೆಚ್‌ಪಿ ಆದಿತ್ಯನಾಥ್ ಸರ್ಕಾರವನ್ನು ಕೇಳಿದೆ.
“ಮಸೂದೆಯ ಮುನ್ನುಡಿಯಲ್ಲಿ ಇದು ಜನಸಂಖ್ಯೆಯನ್ನು ಸ್ಥಿರಗೊಳಿಸಲು ಮತ್ತು ಎರಡು ಮಕ್ಕಳ ನೀತಿಯನ್ನು ಉತ್ತೇಜಿಸುವ ಮಸೂದೆ ಎಂದು ಹೇಳುತ್ತದೆ. ವಿಶ್ವ ಹಿಂದೂ ಪರಿಷತ್ ಎರಡೂ ವಿಷಯಗಳನ್ನು ಒಪ್ಪುತ್ತದೆ” ಎಂದು ಸಂಘಟನೆಯ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಸೋಮವಾರ ಉತ್ತರ ಪ್ರದೇಶ ರಾಜ್ಯ ಕಾನೂನು ಆಯೋಗಕ್ಕೆ (ಯುಪಿಎಸ್‌ಸಿಎಲ್) ಬರೆದ ಪತ್ರದಲ್ಲಿ ತಿಳಿಸಿದ್ದಾರೆ.ಆದರೂ, ಮಸೂದೆಯ ಸೆಕ್ಷನ್ 5, 6 (2) ಮತ್ತು 7 ರಲ್ಲಿ ಹೇಳುವ, ಸಾರ್ವಜನಿಕ ನೌಕರರು ಮತ್ತು ಇತರರನ್ನು ತಮ್ಮ ಕುಟುಂಬದಲ್ಲಿ ಒಂದೇ ಮಗುವನ್ನು ಹೊಂದಲು ಪ್ರೇರೇಪಿಸುವ ವಿಷಯವನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಒಂದು ಮಗುವಿನ ನೀತಿಯ ಅನಪೇಕ್ಷಿತ ಸಾಮಾಜಿಕ, ಆರ್ಥಿಕ ಪರಿಣಾಮಗಳು ಮತ್ತು ಹೆತ್ತವರ ಬದಲು ಮಗುವಿಗೆ ಬಹುಮಾನ ಅಥವಾ ಶಿಕ್ಷೆ ನೀಡುವ ಅಸಂಗತತೆಯನ್ನು ತೆಗೆದುಹಾಕಲು ನಾವು ಸೂಚಿಸುತ್ತೇವೆ ಎಂದು ಕುಮಾರ್ ಹೇಳಿದ್ದಾರೆ. ಆದರೆ ಜನಸಂಖ್ಯೆಯ ಸ್ಥಿರತೆಯನ್ನು ಸಾಧಿಸಲು ಎರಡು ಮಕ್ಕಳ ನೀತಿಯನ್ನು ನಾವು ಒಪ್ಪುತ್ತೇವೆ ಎಂದು ಅವರು ಹೇಳಿದ್ದಾರೆ.ಉತ್ತರ ಪ್ರದೇಶದ ಒಟ್ಟು ಫಲವತ್ತತೆ ದರವನ್ನು (ಟಿಎಫ್‌ಆರ್) ನಿರ್ದಿಷ್ಟ ಸಮಯದೊಳಗೆ 1.7 ಕ್ಕೆ ಇಳಿಸಲು ಪ್ರಯತ್ನಿಸುವ ಮಸೂದೆಯ ಉದ್ದೇಶವನ್ನು ಮರುಪರಿಶೀಲಿಸುವಂತೆ ವಿಹೆಚ್‌‌ಪಿ ಯುಪಿಎಸ್‌ಸಿಎಲ್‌ಗೆ ಸೂಚಿಸಿದೆ.ಜನಸಂಖ್ಯೆ (ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆ-2021 ರ ಕರಡನ್ನು ಇತ್ತೀಚೆಗೆ ಉತ್ತರ ಪ್ರದೇಶ ಸರ್ಕಾರ ಪ್ರಕಟಿಸಿದ್ದು, ಸಾರ್ವಜನಿಕರಿಂದ ಸಲಹೆಗಳನ್ನು ನೀಡುವಂತೆ ಆಹ್ವಾನ ನೀಡಿತ್ತು.
ಪ್ರಸ್ತುತ ಒಂದು ಮಗುವಿನ ನೀತಿಯಿಂದ, ದುಡಿಯುವ ವಯಸ್ಸಿನ ಜನಸಂಖ್ಯೆ ಮತ್ತು ಅವಲಂಬಿತ ಜನಸಂಖ್ಯೆಯ ನಡುವೆ ಅನುಪಾತದಲ್ಲಿ ಏರುಪೇರಾಗುತ್ತದೆ. ಇದು ಇಬ್ಬರು ಪೋಷಕರು ಮತ್ತು ನಾಲ್ಕು ಅಜ್ಜ ಅಜ್ಜಿಯರನ್ನು ನೋಡಿಕೊಳ್ಳಲು ಕೇವಲ ಒಬ್ಬ ದುಡಿಯುವ ವ್ಯಕ್ತಿಯಿರುವಂತಹ ಪರಿಸ್ಥಿತಿಗೆ ತಂದೊಡ್ಡುತ್ತದೆ ಎಂದು ವಿಹೆಚ್‌ಪಿ ಹೇಳಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು