ನವದೆಹಲಿ : ಆರ್ ಬಿ ಐನ ಹೊಸ ನಿಯಮದ ಪ್ರಕಾರ, ಎಟಿಎಂನಲ್ಲಿ ನಗದು ಇಲ್ಲವೆಂದರೆ ಇದರ ಹೊಣೆಯನ್ನು ಬ್ಯಾಂಕ್ ಭರಿಸಬೇಕು. ಅ. 1, 2021 ರಿಂದ ಆರ್ ಬಿ ಐ ಬ್ಯಾಂಕುಗಳ ಎಟಿಎಂಗಳು ತಿಂಗಳಲ್ಲಿ ಒಟ್ಟು 10 ಗಂಟೆಗಳಿಗಿಂತ ಹೆಚ್ಚು ಕಾಲ ಖಾಲಿಯಾಗಿದ್ದರೆ ದಂಡ ವಿಧಿಸಲಿದೆ. ನಿಗದಿತ ಸಮಯದಲ್ಲಿ ಎಟಿಎಂ ನಗದು ತುಂಬದಿದ್ದರೆ, ಬ್ಯಾಂಕ್ ಮೇಲೆ ದಂಡ ವಿಧಿಸಲಾಗುವುದು ಎಂದು ಆರ್ ಬಿ ಐ ಸುತ್ತೋಲೆಯಲ್ಲಿ ಹೇಳಿದೆ.
ಎಟಿಎಂಗಳ ಮೂಲಕ ಸಾರ್ವಜನಿಕರಿಗೆ ನಗದು ಸಿಗಲಿ ಎಂಬ ಕಾರಣಕ್ಕೆ ಆರ್ಬಿಐ ಈ ನಿರ್ಧಾರ ತೆಗೆದುಕೊಂಡಿದೆ.
ಆರ್ಬಿಐ ಪ್ರಕಾರ, ತಿಂಗಳಲ್ಲಿ 10 ಗಂಟೆಗಳಿಗಿಂತ ಹೆಚ್ಚು ಕಾಲ ಎಟಿಎಂನಲ್ಲಿ ನಗದು ಇಲ್ಲದಿದ್ದರೆ, ಆ ಸಂದರ್ಭದಲ್ಲಿ 10,000 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಎಟಿಎಂಗೆ ನಗದು ಹಾಕಲು ಬ್ಯಾಂಕ್ ಯಾವುದೇ ಕಂಪನಿಗಳ ಸೇವೆಗಳನ್ನು ತೆಗೆದುಕೊಳ್ಳುತ್ತಿದ್ದರೂ, ಬ್ಯಾಂಕ್ ಸ್ವತಃ ದಂಡವನ್ನು ಪಾವತಿಸಬೇಕಾಗುತ್ತದೆ.